ರಿಪ್ಪನ್ಪೇಟೆ : ಕುಂಬಾರಿಕೆ ವೃತ್ತಿಯ ಸಂಸ್ಕೃತಿಯ ಪ್ರತೀಕ, ಜಾತಿಯಲ್ಲಿ ಪ್ರವೃತ್ತಿಯಾಗುತ್ತದೆ.ಕುಂಬಾರಿಕೆ ವೃತ್ತಿಯಾಗಿ ಜಾತಿಯಾಗಿ ಮಾರ್ಪಡಿಸಲಾಗಿದೆ. ಮನುಷ್ಯ ನಾಗರೀಕತೆಗೆ ಹುಟ್ಟಿತ್ತೊ ಅಂದಿನಿಂದ ಪ್ರಸ್ತುತ್ತ ಇಂದಿನ ದಿನಮಾನಗಳಿವರೆಗೂ ಕುಂಬಾರರು ತಂತ್ರಜ್ಞ, ಕವಿ, ಕುಶಲಕರ್ಮಿಯಾಗಿ ಸಮಾಜದ ಎಲ್ಲ ವರ್ಗದಲ್ಲಿ ಗುರುತಿಸಿಕೊಂಡವರಾಗಿದ್ದೇವೆ ಎಂದು ನಗರ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ. ರವಿ ಕೆ.ಆರ್. ಕೊಳಗಿ ಹೇಳಿದರು.
ಗೋಡೆಕೊಪ್ಪ ಧರ್ಮಶೆಟ್ಟಿಯವರ ಮನೆಯ ಅವರಣದಲ್ಲಿಂದು ಹೊಸನಗರ ತಾಲ್ಲೂಕು ಕುಂಬಾರರ ಸಂಘದವರು ಆಯೋಜಿಸಲಾದ 15ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿ, ಅಧುನಿಕ ಕಾಲದ ಭರಾಟೆಯಲ್ಲಿ ಕುಂಬಾರಿಕೆ ನಶಿಸಿದೆ. ಆಧುನಿಕತೆ ಬದಲಾವಣೆಯಿಂದ ಗ್ರಾಮೀಣ ಸಂಸ್ಕೃತಿಯನ್ನು ಕಲಿಕೆಯಲ್ಲಿ ತರಲಾಗಿದೆ. ಕುಂಬಾರಿಕೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಇದೊಂದು ನಾಗರೀಕತೆಯ ಅನರ್ಘ್ಯ ವಸ್ತು ಎಂದು ವಿಶ್ಲೇಷಿಸಿದರು.
ಅನಾಗರೀಕ ಜೀವನದಿಂದ ನಾಗರೀಕ ಜೀವನಕ್ಕೆ ಬಂದಮೇಲೆ ತತ್ವ ಜ್ಞಾನಿಯಾಗಿ ತಂತ್ರಜ್ಞಾನ ಹೊಂದುತ್ತಾನೆ. ಚಕ್ರ ಪ್ರಗತಿಯ ಸಂಕೇತವಾಗಿ ಮಾನವನ ಸಂಸ್ಕೃತಿ ಮತ್ತು ಸಮಾಜದ ಸಂಘಟನೆಗಾಗಿ ಬುದ್ದಿ ವಿವೇಕಾವಂತರಾಗಿ ನಮ್ಮಲ್ಲಿರುವ ಶ್ರೇಷ್ಟತೆ, ಯೋಗ್ಯತೆ ಗುರು – ಹಿರಿಯರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಸುಸಂಸ್ಕೃತ ಸಮಾಜ ಕುಂಬಾರ ಸಮಾಜದಾಗಿದೆ.
ಬೌದ್ಧಿಕವಾಗಿ ಶ್ರೀಮಂತಿಕೆ ಪ್ರದರ್ಶನ ಸಮಾಜದ ಎದುರು ಸಾಧನೆಗಳಿಂದ ನಾವು ಬೆಳೆಯಬೇಕು. ಹಣಕ್ಕಿಲ್ಲ ಒಳ್ಳಯ ನಡೆತೆ ವಿಚಾರದಿಂದ ದೊರೆಯುವ ಗೌರವ ಹೆಚ್ಚು ಪ್ರಾದಾನ್ಯತೆ ದೊರೆಯಬೇಕು ಸಮಾಜ ಸಂಘಟನೆಯಲ್ಲಿ ಎಲ್ಲರು ಒಂದಾಗುವ ಮೂಲಕ ಸರ್ಕಾರ ಕುಂಬಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಘೋಷಿಸಬೇಕು ಹಾಗೂ ಸರ್ವಜ್ಞ ಹೆಸರಿನಲ್ಲಿ ಪ್ರಶಸ್ತಿ ಪ್ರಕಟಿಸುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ಸಳ್ಳಿ ಪುಟ್ಟಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಸಮಾಜ ಭಾಂದವರು ಹೆಚ್ಚು ಹೆಚ್ಚು ಕೈಜೋಡಿಸಬೇಕು. ಸಮಾಜದ ಏಳಿಗೆಗೆ ಶ್ರಮಿಸಬೇಕೆಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ರಾಜ್ಯ ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ, ಪಿಎಸಿಎಸ್ ಅಧ್ಯಕ್ಷ ಲೇಖನಮೂರ್ತಿ ಮುಖ್ಯತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವ್ಯಕ್ತಿತ್ವ ಬೆಳಸಿಕೊಳ್ಳಲು ಜಾತಿ ಅಡ್ಡಬರಲ್ಲ. ಶಿಕ್ಷಣಕ್ಕೆ ಒತ್ತು ನೀಡಿ ಪ್ರಾಮಾಣಿಕತೆಗೆ ಹೆಸರಾಗಿರುವ ಕುಂಬಾರ ಸಮಾಜ ಬಹಳ ಇತಿಹಾಸವಿರುವ ಸಮುದಾಯವಾಗಿದ್ದು ಈಗಿನ ತಂತ್ರಜ್ಞಾನ ಬಳಸಿಕೊಳ್ಳಬೇಕೆಂದು ಸಮಾಜಕ್ಕೆ ಕರೆ ನೀಡಿದರು.
ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಹೆಚ್.ಎಲ್.ಶೇಖರಪ್ಪ, ಪ್ರೀತಿ ಹೆಚ್.ರಾವ್, ಹಾಗೂ ಹುಂಚ ಮತ್ತು ಮುಂಬಾರು ಗ್ರಾಪಂ ಸದಸ್ಯರಾದ ಸುವರ್ಣ ನಾಗರಾಜ್, ಅಶ್ವಿನಿ, ವೀರಭದ್ರಪ್ಪ, ಪಲ್ಲವಿಚೇತನ್, ದೇವೇಂದ್ರ, ಶ್ರೀಧರ,ಸುಮಂಗಳ ದೇವರಾಜ್, ರಾಘವೇಂದ್ರ ಸರೋಜ, ನಾಗೇಂದ್ರ, ವಿನಾಯಕ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮೈತಳ್ಳಿ ನಾಗಶೆಟ್ಟ್ರು, ಗೋಡೆಕೊಪ್ಪ ಮೋಟಮ್ಮ ಮತ್ತು ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ., ಪದವಿ ತರಗತಿಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕುಮಾರ ಹಡ್ಲುಬೈಲು ಸ್ವಾಗತಿಸಿದರು. ಅಶ್ವಿತಾ, ಸಿಂಚನ ವಾರ್ಷಿಕ ವರದಿ ಓದಿದರು, ಎಲ್.ಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಎಸ್.ಹೊಸಳ್ಳಿ ನಿರೂಪಿಸಿದರು. ರವಿ ಕೊಳಗಿ ವಂದಿಸಿದರು.