ಕುಟುಂಬ ಮತ್ತು ಸಮಾಜದ ಕೊಂಡಿಯಾಗಿ ಬಾಳಬೇಕಾದ ಯುವಸಮೂಹ ದುಶ್ಚಟ ಮುಕ್ತ ಜೀವನ ಸಾಗಿಸಲು ಪಣ ತೊಡಬೇಕಿದೆ ; ಗೃಹ ಸಚಿವ ಆರಗ ಜ್ಞಾನೇಂದ್ರ

0
364

ತೀರ್ಥಹಳ್ಳಿ : ಇಂದಿನ ಯುವಕರು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ತಮ್ಮ ಕುಟುಂಬ ನಿರ್ವಹಣೆಗಾಗಿ ಹಲವಾರು ವಿಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಕೂಡ ದುಶ್ಚಟವೆಂಬ ಮಹಾಮಾರಿಗೆ ತುತ್ತಾಗಿ ತಮ್ಮ ಕುಟುಂಬವನ್ನು ಹಾಳುಮಾಡುವದರ ಜೊತೆಯಲ್ಲಿ ಸಮಾಜಕ್ಕೂ ಬೇಡದ ವ್ಯಕ್ತಿಗಳಾಗುತ್ತಿರುವುದು ಬೇಸರದ ಸಂಗತಿ.

ಮದ್ಯಪಾನವೆಂಬ ಕೆಟ್ಟಕಾಯಿಲೆಯಿಂದ ಎಷ್ಟೋ ಕುಟುಂಬಗಳು ಅದೋಗತಿಗೆ ತಲುಪಿವೆ. ಮದ್ಯಪಾನವೆಂಬ ಪಿಡುಗನ್ನು ಹೋಗಲಾಡಿಸಲು ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯವರ ಮದ್ಯವರ್ಜನ ಶಿಬಿರ ಎಂಬ ಮಹಾಯಜ್ಞ ನಿಮ್ಮ ಬಾಳಿಗೆ ಹೊಸ ಬೆಳಕಾಗಲಿ ಎಂದು ಗೃಹಸಚಿವ ಆರಗ ಜ್ಞಾನೇಂದ್ರರವರು ತಿಳಿಸಿದರು.

ಅವರು ಕಟ್ಟೆಹಕ್ಕಲು ಶ್ರೀ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಸಾಲ್ಗಡಿ ಕಟ್ಟೆಹಕ್ಕಲು ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನಲ್ಲಿ ಹಮ್ಮಿಕೊಂಡಿದ್ದ 1561 ನೇ ಮದ್ಯವರ್ಜನ ಶಿಬಿರದಲ್ಲಿ 81 ಜನ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಿಬಿರಕ್ಕೆ ಸೇರಿದವರಲ್ಲಿ ಯುವಕರ ದಂಡೆ ಜಾಸ್ತಿ ಇದ್ದು ಇದನ್ನು ನೋಡಿದಾಗ ಬಹಳ ಬೇಸರವೆನಿಸುತ್ತದೆ. ನಿಮಗೆಲ್ಲ ಜವಾಬ್ದಾರಿ ಇಲ್ಲವಾ. ನಿಮಗೆ ತಂದೆ – ತಾಯಿ, ಪತ್ನಿ, ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಕನಿಕರ ಇಲ್ಲವಾ. ದುಡಿಮೆಯ ಹಣವನ್ನು ಮದ್ಯ ಕುಡಿಯಲು ಕಾಲಿಮಾಡಿ ಕುಟುಂಬವನ್ನು ಉಪವಾಸ ಕೆಡಿಸುತ್ತಿರಲ್ಲ. ನಿಮ್ಮಿಂದ ನಿಮ್ಮ ಮಕ್ಕಳಿಗೆ ಯಾವ ಸಂದೇಶ ಕೊಡಲು ಸಾಧ್ಯ. ನೀವು ಕುಡಿತದ ದಾಸರಾದರೆ ನಿಮ್ಮ ಮಕ್ಕಳು ಇನ್ನೊಂದು ದುರಭ್ಯಾಸಕ್ಕೆ ಅಂಟಿಕೊಳ್ಳುತ್ತಾರೆ. ಆಗ ನಿಮ್ಮ ಕುಟುಂಬದ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪತ್ತದೆ ಎಂದು ಗಂಭೀರವಾಗಿ ಯೋಚಿಸಿ. ಇಷ್ಟು ದಿನ ನೀವು ಮಾಡಿದ ಕುಡಿತದ ಬಾಳು ಈ ಮದ್ಯವರ್ಜನ ಶಿಬಿರದಿಂದ ಕೊನೆಗೊಂಡು ಮುಂದಿನ ದಿನಗಳಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಸಂಕಲ್ಪ ತೊಟ್ಟು ಕುಟುಂಬದ ಹಾಗೂ ಸಮಾಜದ ಆಸ್ತಿಯಾಗಿ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಅಧ್ಯಕ್ಷ ಸುಬ್ರಮಣ್ಯ ಭಟ್, ಗೌರವ ಅಧ್ಯಕ್ಷ ತುಂಬರಮನೆ ಚಂದ್ರಶೇಖರ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಹೆದ್ದೂರ್ ನವೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ಶ್ರೀಕಾಂತ್ ವಿ ನಾಯಕ್ ತೀರ್ಥಹಳ್ಳಿ
ಜಾಹಿರಾತು

LEAVE A REPLY

Please enter your comment!
Please enter your name here