Home Crime News ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಹಲ್ಲೆ ನಡೆಸಿ ಪತಿಯಿಂದ ಪತ್ನಿಯ ಕೊಲೆ..!
ಶಿಕಾರಿಪುರ: ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಶನಿವಾರ ಮಧ್ಯಾಹ್ನ 12-30ಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಳ್ಳಿನಕೊಪ್ಪ ಗ್ರಾಮದ ವಾಸಿ ಮಂಜುಳಾ ಬಾಯಿ (37) ಇವರನ್ನು ಆಕೆಯ ಗಂಡ ಮಲ್ಲಿಕನಾಯ್ಕ (45) ಈತನು ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರಕ್ಕೆ ಜಗಳ ತೆಗೆದು ಮಂಜುಳಾ ಬಾಯಿ ರವರ ಹಣೆ ಮತ್ತು ಮುಖಕ್ಕೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುತ್ತಾರೆಂದು ಮೃತೆಯ ಮಗಳು ದಿವ್ಯಾರವರು ನೀಡಿದ ದೂರಿನಂತೆ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 498(ಎ), 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
Related