ಕುಡುಕರ ಆಶ್ರಯ ತಾಣವಾಗಿರುವ ರಿಪ್ಪನ್‌ಪೇಟೆ ಸಾರ್ವಜನಿಕ ಪ್ರಯಾಣಿಕರ ಬಸ್ ತಂಗುದಾಣ !

0
517

ರಿಪ್ಪನ್‌ಪೇಟೆ: ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗವಾಗಿರುವ ರಿಪ್ಪನ್‌ಪೇಟೆಯ ಸಾರ್ವಜನಿಕ ಪ್ರಯಾಣಿಕರ ಬಸ್ ತಂಗುದಾಣ ಕುಡುಕರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಜೈನರ ದಕ್ಷಿಣ ಕಾಶಿ ಎಂದೆ ಖ್ಯಾತಿ ಹೊಂದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರಕ್ಕೆ, ಸಹ್ಯಾದ್ರಿಯ ಪರ್ವತ ಶ್ರೇಣಿಯಾದ ಕೊಡಚಾದ್ರಿ, ರಾಮಚಂದ್ರಾಪುರ ಮಠ, ಶರಾವತಿಯ ಉಗಮಸ್ಥಾನ ಅಂಬುತೀರ್ಥ, ಉಡುಪಿ, ಮಂಗಳೂರು, ಕೊಲ್ಲೂರು, ಮುರುಡೇಶ್ವರ ಹೀಗೆ ಹಲವು ಪ್ರೇಕ್ಷಣೀಯ ಕೇಂದ್ರಗಳಿಗೆ ತೆರಳುವ ಸಾವಿರಾರು ಭಕ್ತರು ಮತ್ತು ಮಣಿಪಾಲ, ಮಂಗಳೂರು ಆಸ್ಪತ್ರೆಗೆ ಹೋಗುವ ಅನಾರೋಗ್ಯ ಪೀಡಿತರು ಮತ್ತು ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಪ್ರೌಢಶಾಲೆ, ಕಾಲೇಜ್, ಪದವಿ ಕಾಲೇಜ್‌ಗಳಿಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳು ತಮ್ಮ ಊರುಗಳಿಗೆ ಹೋಗಲು ತಂಗುದಾಣದಲ್ಲಿ ನಿಲ್ಲದ ಸ್ಥಿತಿ ನಿರ್ಮಾಣವಾದರೂ ಕೂಡಾ ಸ್ಥಳೀಯ ಗ್ರಾಮಾಡಳಿತವಾಗಲಿ ಮತ್ತು ಪೊಲೀಸ್ ಇಲಾಖೆಯರಾಗಲಿ ಗಮನಹರಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ದೂರದ ಊರುಗಳಿಗೆ ಹೋಗಲು ಬಸ್ ಸೌಲಭ್ಯಕ್ಕಾಗಿ ಕಾಯಬೇಕಾಗಿದ್ದು ಸುವ್ಯವಸ್ಥೆಯ ತಂಗುದಾಣ ಇಲ್ಲದೆ ಅಲ್ಲಿ ಇಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಇಲ್ಲವೇ ರಸ್ತೆ ಅಂಚಿನಲ್ಲಿ ನಿಲ್ಲಬೇಕಾಗಿದೆ ಈ ಉರಿ ಬಿಸಿಲಿನಲ್ಲಿ ತಲೆ ತಿರುಗಿ ಬೀಳುವ ಸ್ಥಿತಿ ಇದ್ದರೂ ಕೂಡಾ ಇಲ್ಲಿನ ತಂಗುದಾಣದಲ್ಲಿ ಆಸ್ರಯ ಪಡೆಯಲು ಹೋಗುವುದೆ ಕಷ್ಟವಾಗಿದೆ ಕಾರಣ ಕುಡುಕರಿಗೆ ಆಶ್ರಯ ತಾಣದಂತಾಗಿರುವ ಈ ತಂಗುದಾಣದಲ್ಲಿ ಹೇಗೆ ಇರುವುದು ಎಂಬ ಚಿಂತೆ ಕಾಡತೊಡಗಿದೆ.

ಒಟ್ಟಾರೆಯಾಗಿ ಇಲ್ಲಿನ ಹೃದಯ ಭಾಗದಂತಿರುವ ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಬಸ್ ನಿಲ್ದಾಣ ಇದ್ದು ಇಲ್ಲದ ಸ್ಥಿತಿಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ದೇವರು ಕೊಟ್ಟರು ಬೇಡದಂತಾಗಿದೆ.

ಕುಡುಕರು ಮೂತ್ರ ವಿಸರ್ಜನೆ ಮಾಡುವುದು, ಎಲ್ಲೆಂದರಲ್ಲಿ ಉಗಿಯುವುದು ಹೀಗೆ ಸ್ವಚ್ಚತೆ ಇಲ್ಲದೆ ಈ ನಿಲ್ದಾಣದೊಳಗೆ ನಿಲ್ಲುವುದೇ ಕಷ್ಟಕರವಾಗಿದೆ ಎಂದು ವಿವರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here