20.6 C
Shimoga
Friday, December 9, 2022

ಕುತ್ತಿಗೆ ಕೊಯ್ದ ಮೆಷಿನ್ ಬ್ಲೇಡ್ ; ಕಾರ್ಮಿಕ ಸಾವು !

ತೀರ್ಥಹಳ್ಳಿ : ಪ್ಲೈವುಡ್ ಕೆಲಸಕ್ಕೆ ತೆರಳಿದ್ದ ಕಾರ್ಮಿಕರೊಬ್ಬರು
ಮೆಷಿನ್‌ನ ಬ್ಲೇಡ್ ಕುತ್ತಿಗೆ ಕೊಯ್ದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ.

ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.

ಮುಂಡಾಸ್ ಕೊಪ್ಪ ಗ್ರಾಮದ ಆದಿತ್ಯ ಮೃತಪಟ್ಟ ಕಾರ್ಮಿಕ. ಅಂಗಡಿ ನಿರ್ಮಾಣಕ್ಕೆ ಬೆಜ್ಜವಳ್ಳಿ ಗ್ರಾಮದ ಲೋಕೇಶ್ ಎಂಬುವವರ ಅಂಗಡಿಗೆ ಪ್ಲೈವುಡ್ ಕೆಲಸಕ್ಕೆ ಆದಿತ್ಯ ತೆರಳಿದ್ದರು. ಮೆಷಿನ್‌ನಿಂದ ಪ್ಲೈವುಡ್ ಕಟ್ ಮಾಡುವಾಗ ದುರಂತ ನಡೆದಿದೆ. ಮೆಷಿನ್‌ನ ಬ್ಲೈಡ್ ಆದಿತ್ಯನ ಕುತ್ತಿಗೆಯನ್ನೇ ಕೊಯ್ದಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ಜೆಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆದಿತ್ಯ ಸಾವನ್ನಪ್ಪಿದ್ದಾರೆ.


ಪಿಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!