ಕುವೆಂಪು ಜೈವಿಕ ಧಾಮದ ವಿರುದ್ಧ ಸಿಡಿದೆದ್ದ ರೈತರು..! ಶೇಡ್ಗಾರು ತುಂಬ್ರಮನೆ, ಬೆಳ್ಳಂಗಿಯ 300 ಕುಟುಂಬಗಳ ಸ್ಥಿತಿ ಅತಂತ್ರ….

0
380
– 2000 ರೈತರ ಒಗ್ಗಟ್ಟು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ..!
– ಹಿರಿಯ ವಕೀಲ ಮಾನವ ಹಕ್ಕುಗಳ ಚಿಂತಕ ಸುಧೀರ್ ಕುಮಾರ್ ಮುರುಳಿರವರಿಂದ ಕಾನೂನು ಮತ್ತು ಹೋರಾಟಗಳ ಬಗ್ಗೆ ಸಲಹೆ

ತೀರ್ಥಹಳ್ಳಿ: ಮಲೆನಾಡಿನ ಜನರ ಬದುಕು ತೂಗುಯ್ಯಾಲೆಯಲ್ಲಿದೆ. ಒಂದು ಕಡೆ ಕಸ್ತೂರಿ ರಂಗನ್ ವರದಿ, ಇನ್ನೊಂದು ಕಡೆ ಪಶ್ಚಿಮ ಘಟ್ಟ ಯೋಜನೆ ಹೀಗಾಗಿ ರೈತರ ಬದುಕು ಅತಂತ್ರದಲ್ಲಿದೆ. ಈ ನಡುವೆ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುವೆಂಪು ಜೈವಿಕ ಧಾಮ ಯೋಜನೆ ಇದೀಗ ಮತ್ತೆ ರೈತರ ಬದುಕಿಗೆ ಮಾರಕವಾಗಿದೆ.

ಶೇಡ್ಗಾರು, ತುಂಬ್ರಮನೆ, ಬೆಳ್ಳಂಗಿ ವ್ಯಾಪ್ತಿಯಲ್ಲಿ 300 ಕುಟುಂಬಗಳ 2000ಕ್ಕೂ ಹೆಚ್ಚು ಮಂದಿ ಬದುಕು ಕಳೆದುಕೊಳ್ಳಲಿದ್ದಾರೆ. ನೂರಾರು ವರ್ಷಗಳಿಂದ ಬದುಕು ಸಾಗಿಸಿದವರ ಬದುಕಿಗೆ ಸರಕಾರದ ಯೋಜನೆ ಕೊಳ್ಳಿ ಇಡಲಿದೆ.

ಬಹುತೇಕ ಸಣ್ಣ ರೈತರು, ಕೂಲಿ ಕಾರ್ಮಿಕರು ಇರುವ ಈ ಗ್ರಾಮಗಳಲ್ಲಿ ಜೈವಿಕ ಧಾಮದ ಭೂತ ಬದುಕು ಕಿತ್ತುಕೊಳ್ಳುವ ಆತಂಕ ಸೃಷ್ಟಿ ಮಾಡಿದೆ.

ಈಗಾಗಲೇ ಸರ್ಕಾರ ಸೆಕ್ಷನ್-4 ಜಾರಿ ಮಾಡಿದ್ದು, ಮನೆ, ಆಸ್ತಿ, ಪಾಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆದ್ದರಿಂದ ರೈತರು ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದರಾಗಿದ್ದಾರೆ. ಮೀಸಲು ಅರಣ್ಯ ವಿರೋಧಿ ಒಕ್ಕೂಟ ಸಮಿತಿ ರಚನೆ ಮಾಡಿದ್ದು, 30 ಮಂದಿ ಸಮಿತಿಯಲ್ಲಿದ್ದಾರೆ.

ಈ ಸಮಿತಿಯ ಅದ್ಯಕ್ಷರು ದಿನೇಶ್ ನಲಿಮಕ್ಕಿ ಮತ್ತು ಈ ಸಮಿತಿಯ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅದ್ಯಕ್ಷರು ಮತ್ತು ಸದಸ್ಯರಾದ ಪಣಿರಾಜ್ ನೇತೃತ್ವದಲ್ಲಿ ಅರಣ್ಯ ಇಲಾಖೆಗೆ ಪರಿಶೀಲನಾ ಅರ್ಜಿ ಸಲ್ಲಿಸಲು ರೈತರು ಸಿದ್ದರಾಗಿದ್ದಾರೆ.

ಅರಣ್ಯ ಇಲಾಖೆ, ಜಿಲ್ಲಾಡಳಿತ, ಶಾಸಕರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಖ್ಯಾತ ಹಿರಿಯ ವಕೀಲರು, ಮಾನವ ಹಕ್ಕುಗಳ ಮತ್ತು ರೈತ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದ ಹೋರಾಟಗಾರರು ಆದ ಸುಧೀರ್ ಕುಮಾರ್ ಮುರೊಳ್ಳಿ ಆಗಮಿಸಿ ರೈತರಿಗೆ ಧೈರ್ಯ ತುಂಬಿ ಕಾನೂನು ಹೋರಾಟಕ್ಕೆ ಸಲಹೆ ನೀಡಿದ್ದಾರೆ.

ಮಲೆನಾಡಿನ ಜ್ವಲಂತ ಸಮಸ್ಯೆ ಮಾನವ ಹಕ್ಕುಗಳ ವಿರುದ್ಧ ಸರ್ಕಾರ ಸರ್ಕಾರ ಕಾರ್ಯ ಯೋಜನೆಗಳು ಮತ್ತು ರೈತ ವಿರೋಧಿ ಚಟುವಟಿಕೆಗಳ ಬಗ್ಗೆ ವಿರುದ್ಧ ಇದೀಗ ರೈತ ಸಮುದಾಯ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಸದರಿ ಕಾಯಿದೆಯನ್ನು ವಾಪಸ್ ಪಡೆಯದಿದ್ದಲ್ಲಿ ದೊಡ್ಡ ಹೋರಾಟವನ್ನು ಮಾಡಲು ಮುಂದಾಗಿರುವುದಾಗಿ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಯಿತು.

ವರದಿ: ಲಿಯೋ ಅರೋಜ
ಜಾಹಿರಾತು

LEAVE A REPLY

Please enter your comment!
Please enter your name here