ಕುವೆಂಪು ವಿವಿ ಉಪ ಕುಲಸಚಿವರ ವಜಾಗೊಳಿಸಿ ಆದೇಶ..! ಯಾಕೆ?

0
422

ಶಿವಮೊಗ್ಗ : ಕುವೆಂಪು ವಿವಿಯ ಪ್ರಾಧಿಕಾರಗಳ ವಿಭಾಗದ ಪ್ರಭಾರ ಉಪ ಕುಲಸಚಿವ ಎಂ.ಸೀತಾರಾಮ ಅವರನ್ನು ಕೆಲಸದಿಂದ ವಜಾಗೊಳಿಸಿ ವಿವಿಯ ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್ ಆದೇಶ ನೀಡಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಸೀತರಾಮ ಅವರನ್ನು ಏ.15ರ ಗುರುವಾರ ಕೆಲಸದಿಂದ ವಜಾಗೊಳಿಸಲಾಗಿದೆ.

ಸೀತರಾಮ ಅವರು ಪಡೆದಿದ್ದ ಪರಿಶಿಷ್ಟ ಪಂಗಡದ ಮಾಲೇರು ಜಾತಿ ಪ್ರಮಾಣ ಪತ್ರವನ್ನು ಉಡುಪಿ ಡಿಸಿ ಹಾಗೂ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷ ಜಿ.ಜಗದೀಶ್ ಅವರು ರದ್ದುಪಡಿಸಿದ್ದಾರೆ.

ಸೀತರಾಮ ಅವರು 1989 ನ.04ರಂದು ಕುವೆಂಪು ವಿವಿಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಗೆ ನಿಗದಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದರು. ಆ ನಂತರ ಬಡ್ತಿ ಪಡೆದು ಪ್ರಭಾರ ಉಪಕುಲಸಚಿವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here