ಕುಸಿಯುವ ಹಂತ ತಲುಪಿದ ಅರವಿಂದ ನಗರದ ಕಿರು ಸೇತುವೆ: ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು !

0
181

ಚಿಕ್ಕಮಗಳೂರು: ನಗರದ ಅರವಿಂದ ನಗರ ಬಡಾವಣೆಯ ಚೌಡೇಶ್ವರಿ ದೇವಸ್ಥಾನ ಬಳಿ ಇರುವ ಕಿರು ಸೇತುವೆ ಹಂತ ಹಂತವಾಗಿ ಕುಸಿಯುತ್ತಿದ್ದರು ನಗರಸಭೆ ಅಧಿಕಾರಿ ವರ್ಗದವರು ತಲೆ ಕೆಡಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆಯಿಂದ ಕೂಡಿದ್ದು ಯಾವುದೇ ಸಂದರ್ಭದಲ್ಲಿ ಮುರಿದು ಬೀಳುವ ಅಪಾಯ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಲುವೆಗಳಲ್ಲಿ ಕಸ-ಕಡ್ಡಿ ಇನ್ನಿತರೆ ತ್ಯಾಜ್ಯಗಳನ್ನು ಜನ ವಿಪರೀತವಾಗಿ ಬಿಸಾಡುತ್ತಿತ್ತು ಇದರಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ಅನೇಕ ಅವಘಡಗಳು ಸಂಭವಿಸುತ್ತಿವೆ.

ಸೇತುವೆಗಳ ಬಳಿ ರಾಶಿ ರಾಶಿ ಕಸ ಕಟ್ಟುವುದು ಸಾಮಾನ್ಯ ಸಂಗತಿಯಾಗಿದೆ. ಕಾಲುವೆಗಳ ಅಸಮರ್ಪಕ ನಿರ್ವಹಣೆಯೂ ಇದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ‌.

ಜಾಹಿರಾತು

LEAVE A REPLY

Please enter your comment!
Please enter your name here