ಕೃಷಿ ಪರಿಕರ ಮಾರಾಟಗಾರರಿಗಾಗಿ ನಡೆದ ತರಬೇತಿ ಕಾರ್ಯಕ್ರಮ

0
449

ಹೊಸನಗರ ; ಇಲ್ಲಿನ ಕೃಷಿ ಇಲಾಖೆ ಕಛೇರಿಯಲ್ಲಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಕಾರ್ಯಕಮ್ರವನ್ನು ಸಾಗರ ವಿಭಾಗದ ಉಪ ಕೃಷಿ ನಿರ್ದೇಶಕ ಡಿ.ಎಂ ಬಸವರಾಜ ಅಧ್ಯಕ್ಷತೆಯಲ್ಲಿ ನಡೆಯಿತು.

ತರಬೇತಿಯಲ್ಲಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಪರಿಕರಗಳನ್ನು ವಿತರಣೆ ಮಾಡುವ ಮುನ್ನ ಅನುಸರಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮುಖ್ಯವಾಗಿ ಪರವಾನಿಗೆಯನ್ನು ಮತ್ತು ರಸಗೊಬ್ಬರ ದಾಸ್ತಾನು ಪ್ರಮಾಣ ವಿವರ ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ರೈತರಿಗೆ ಎದ್ದು ಕಾಣುವ ರೀತಿ ಪ್ರದರ್ಶಿಸಲು ಎಚ್ಚರಿಕೆ ನೀಡಲಾಯಿತು. ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿಂದ ತಾಲ್ಲೂಕಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ಉತ್ಪಾದನಾ ಸಂಸ್ಥೆಗಳಿಂದ ಸರಬರಾಜು ಪ್ರಮಾಣ ಪತ್ರ ಪಡೆದು ದಾಸ್ತಾನು ಮಾಡಿ, ಪಿಓಎಸ್ ಮುಖಾಂತರ ಹಾಗೂ ನಮೂನೆ-ಎಂ ರಸೀದಿ ನೀಡಿ ರೈತರಿಗೆ ವಿತರಣೆ ಮಾಡಲು ಎಲ್ಲಾ ಮಾರಾಟಗಾರರಿಗೆ ಉಪ ಕೃಷಿ ನಿರ್ದೇಶಕರು ಸೂಚಿಸಿದರು.

ಮಾರಾಟಗಾರರಿಗೆ ಮುಖ್ಯವಾಗಿ ಬೀಜ ನಿಯಮಗಳು 1968, ರಸಗೊಬ್ಬರ ನಿಯಂತ್ರಣ ಆದೇಶ 1985, ಕೀಟನಾಶಕ ನಿಯಮಗಳು 1971 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಪ್ರಕಾರ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ನಿರ್ವಹಿಸಿ ರೈತರಿಗೆ ಗರಿಷ್ಠ ಮಾರಾಟ ದರದಲ್ಲಿ ವಿತರಿಸಲು ವೀರಭದ್ರಪ್ಪ ಹೆಚ್ ಸಹಾಯಕ ಕೃಷಿ ನಿರ್ದೇಶಕರು,ಸ ಜಾಗೃತಿ ದಳ ಶಿವಮೊಗ್ಗರವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಜಾಗೃತಿ ದಳದ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ನಿಯಮಾವಳಿಗಳ ಪ್ರಕಾರ ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳ ನಿರ್ವಹಣೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಕಾನೂನಾತ್ಮಕವಾಗಿ ಹಾಗೂ ಆಡಳಿತಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಹೊಸನಗರ ಇವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪ ಕೃಷಿ ನಿರ್ದೇಶಕರು, ಸಾಗರ, ಸಹಾಯಕ ಕೃಷಿ ನಿರ್ದೇಶಕರು, ಜಾಗೃತಿ ದಳ, ಶಿವಮೊಗ್ಗ, ಸಹಾಯಕ ಕೃಷಿ ನಿರ್ದೇಶಕರು, ಹೊಸನಗರ ಹಾಗೂ ಎಲ್ಲಾ ಹೋಬಳಿಯ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here