ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು!

0
3982

ರಿಪ್ಪನ್‌ಪೇಟೆ : ಆಟವಾಡುತ್ತಿರುವ ಸಂದರ್ಭದಲ್ಲಿ ಮನೆಯ ಸಮೀಪವಿದ್ದ ಕೃಷಿ ಹೊಂಡಕ್ಕೆ ಕಾಲುಜಾರಿ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಹಾರಂಬಳ್ಳಿಯಲ್ಲಿ ಗುರುವಾರ ನಡೆದಿದೆ‌.

ವಾಸುದೇವ ಎಂಬುವರ ಪುತ್ರ ಭರತ್ ರಾಜ್ (15) ಮೃತ ದುರ್ದೈವಿಯಾಗಿದ್ದು, ಈತ ರಿಪ್ಪನ್‌ಪೇಟೆಯ ಮೇರಿ ಮಾತ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಈತನ ತಂದೆ ವಾಸುದೇವ ಸಹ ಇದೇ ಶಾಲೆಯಲ್ಲಿ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಭರತ್ ರಾಜ್ ಗುರುವಾರ ಶಾಲೆ ಮುಗಿಸಿಕೊಂಡು ಮನೆಯ ಬಳಿ ಆಟವಾಡಲು ತೆರಳಿದ್ದ ಸಮಯದಲ್ಲಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿರುವುದಾಗಿ ತಿಳಿದುಬಂದಿದೆ.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here