ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರಿಲ್ಲದೆ ಮೂತ್ರಾಲಯಕ್ಕೆ ಬೀಗ !!

0
603

ಚಿಕ್ಕಮಗಳೂರು: ನಗರದ ಕೇಂದ್ರ ಸ್ಥಾನವಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರಿಲ್ಲದೆ ಮೂತ್ರಾಲಯಕ್ಕೆ ಬೀಗ ಹಾಕಿರುವ ಘಟನೆ ಇಂದು ನಡೆದಿದೆ.

ಸಾಮಾನ್ಯವಾಗಿ ದೂರದ ಊರಿನಿಂದ ಬಂದು ಹೋಗುವ ಪ್ರಯಾಣಿಕರು, ಅವರದೇ ಸಿಬ್ಬಂದಿಗಳಾದ ಡ್ರೈವರ್, ಕಂಡಕ್ಟರ್ ಗಳು, ಬಸ್ ನಿಲ್ದಾಣದಲ್ಲಿನ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಇಲ್ಲಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆ ಮಾಡಲಾಗದೆ ಪರದಡುತ್ತಿರುವಂತಹ ದೃಶ್ಯಗಳು ಕಂಡುಬಂದಿದ್ದೆ.

ಜಿಲ್ಲಾ ಕೇಂದ್ರದ ಮಧ್ಯಭಾಗದಲ್ಲಿಯೇ ಈ ರೀತಿಯ ನೀರಿನ ಸಮಸ್ಯೆ ಕಂಡುಬಂದಿರುವುದಿರುವುದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ನಿರ್ಲಕ್ಷ್ಯದ ಆಡಳಿತದ ಪ್ರತಿಬಿಂಬವಾಗಿದ್ದು.

ನೀರಿನ ಸಮಸ್ಯೆ ಬಗ್ಗೆ ಕೆಲ ಸಿಬ್ಬಂದಿಗಳುನ್ನು ಕೇಳಿದಾಗ ನೀರಿನ ಮೋಟಾರ್ ಸುಟ್ಟು ಹೂಗಿದ್ದು ಮೆಕ್ಯಾನಿಕ್ ಬಂದ ಮೇಲೆ ಸರಿ ಮಾಡಿಸುತ್ತೆವೆ ಎಂಬ ಉಡಾಫೆ ಉತ್ತರವನ್ನು ನೀಡುತ್ತಾರೆ.

ಈ ಬಗ್ಗೆ ಫೋನ್ ಮೂಲಕ ಮಾಹಿತಿಗೆ ಪಡೆಯಲು ನಿಯಂತ್ರಣಧಿಕಾರಿಯವರನ್ನು ಸಂಪರ್ಕಿಸಿದ್ದರೆ ಅವರ ಫೋನ್ ವ್ಯಾಪ್ತಿ ಪ್ರದೇಶದ ಹೋಗಿದ್ದಾರೆ ಎಂಬ ಮಾಹಿತಿ ಬರುತ್ತಿದೆ.

ಈ ಎಲ್ಲಾ ಲಕ್ಷಣಗಳನ್ನು ನೋಡಿದರೆ ಅಧಿಕಾರಿಗಳಿಗೆ ಕೆಲಸ ಮಾಡುವ ಬಗ್ಗೆ ಯಾವುದೇ ರೀತಿಯ ಜವಾಬ್ದಾರಿ ಇಲ್ಲದಂತೆ ಕಾಣುತ್ತದೆ ಎಂದು ನಿಲ್ದಾಣದಲ್ಲಿದ ಪ್ರಯಾಣಿಕರರು ದೂರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here