ಕೆನರಾ ಬ್ಯಾಂಕ್ ಐ.ಜಿ ರಸ್ತೆ ಶಾಖೆಯಿಂದ ಸ್ವಾತಂತ್ರ್ಯ ಭಾರತದಲ್ಲಿ ನಡೆದ ವಿಭಜನೆಯ ಭೀಕರತೆಯ ಚಿತ್ರಗಳ ಬಿಡುಗಡೆ

0
550

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆದ ಭೀಕರತೆಯ ಸಂಸ್ಕರಣಾ ದಿನದ ಚಿತ್ರಣ ಪ್ರದರ್ಶನವನ್ನು ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥರಾದ ಅನಿಲ್ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಭಾರತವು ಬ್ರಿಟಿಷ್ ರಿಂದ ಸ್ವಾತಂತ್ರ್ಯ ಪಡೆದು 75 ವರ್ಷ ಆಗಿದ್ದು ಈ ನೆನಪಿಗಾಗಿ ಭಾರತೀಯರಾದ ನಾವು ಈ 75ನೇಯ ಸ್ವಾತಂತ್ರ್ಯವನ್ನು ರಾಷ್ಟ್ರ ವ್ಯಾಪಿ ಆಜಾದ್ ಕಾ ಅಮೃತ್ ಮಹೋತ್ಸವ ಹೆಸರಿನಿಂದ ಆಚರಣೆ ಮಾಡಲಿದ್ದೇವೆ.

ಈ 75ನೇ ಆಜಾದ್ ಕಾ ಅಮೃತ್ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ, ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ಪಡೆಯುವ ಮೊದಲು ಮತ್ತು ನಂತರ ನಡೆದ ಭೀಕರ ಘಟನೆಗಳನ್ನು ಪೋಟೋ ಚಿತ್ರದ ಮೂಲಕ ಸಾರ್ವಜನಿಕರಿಗೆ ತಿಳಿಸುವ ಸಣ್ಣ ಪ್ರಯತ್ನ ನಡೆಸಲಾಗುತ್ತಿದೆ.

ಸಾರ್ವಜನಿಕರು ಆ ಸಮಯದಲ್ಲಿ ನಡೆದ ಘಟನಾವಳಿಗಳನ್ನು ಚಿತ್ರದ ಮ‌ೂಲಕ ನೋಡಿ ತಿಳಿದುಕೊಳ್ಳುಬಹುದು ಎಂದು ಹೇಳಿದರು.

ಈ ಚಿತ್ರಗಳ ಉದ್ಘಾಟನಾ ಸಮಾರಂಭದಲ್ಲಿ ಐ.ಜಿ.ರಸ್ತೆ ಶಾಖೆ ಮುಖ್ಯ ವ್ಯವಸ್ಥಾಪಕರಾದ ಬಾಲಕೃಷ್ಣ, ಕೆನರಾ ಬ್ಯಾಂಕ್ ಜಿಲ್ಲಾ ಮಾಹಿತಿ ವಿಭಾಗದ ವ್ಯವಸ್ಥಾಪಕರದ ಕೋಟಿಶ್ವರಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here