ಶಿವಮೊಗ್ಗ: ಇಲ್ಲಿನ ಆಲ್ಕೊಳ ಗ್ರಾಮದ ಕೆರೆ ಏರಿಯ ಮೇಲೆ ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಶುಕ್ರವಾರ ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿಗಳಾದ ಸದ್ದಾಂ (30), ಶಕೀಲ್ ಮುನಾವರ್(30), ಶಿವಮೊಗ್ಗದ ಎಲ್.ಬಿ.ಎಸ್.ನಗರ ನಿವಾಸಿ ಶ್ರೀಕಾಂತ್ ಅಲಿಯಾಸ್ ರೊನಾಲ್ಡೋ (24), ವೆಂಕಟೇಶ ನಗರ ನಿವಾಸಿ ಸಂತೋಷ್ ಅಲಿಯಾಸ್ ಹಾವಳಿ (26) ಬಂಧಿತರು.

ಆರೋಪಿಗಳ ಬಳಿಯಿಂದ ಅಂದಾಜು 45,000 ರೂ. ಮೌಲ್ಯದ ಒಟ್ಟು 1,250 ಗ್ರಾಂ ಗಾಂಜಾ 1,310 ರೂ. ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.