Home Crime News ಕೆಲಸ ಕೊಟ್ಟ ಪೆಟ್ರೋಲ್ ಬಂಕ್ ಮಾಲೀಕನಿಗೆ ಕೈಕೊಟ್ಟು ಬರೋಬ್ಬರಿ 24 ಲಕ್ಷ ರೂ. ಲಪಟಾಯಿಸಿ ಸಿಕ್ಕಿಬಿದ್ದ...
ಹೊಸನಗರ: ಕೆಲಸ ಕೊಟ್ಟ ಯಜಮಾನನಿಗೆ ಕೈಕೊಟ್ಟು ಸುಳ್ಳು ಲೆಕ್ಕ ನೀಡಿ ಸುಮಾರು ಅಂದಾಜು 24ಲಕ್ಷ ಹಣವನ್ನು ಲಪಟಾಯಿಸಿ ನಂತರ ಸಿಕ್ಕಿ ಹಾಕಿಕೊಂಡ ಘಟನೆ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ ?
ಹೊಸನಗರದ ಗುತ್ತಿಗೆದಾರರು ಹಾಗೂ ಪೆಟ್ರೋಲ್ ಬಂಕ್ ಮಾಲೀಕರಾದ ಮಂಜಪ್ಪಗೌಡರವರಿಗೆ ಸೇರಿದ ಪೆಟ್ರೋಲ್ ಬಂಕ್ನಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಹಿರೆಮಣತಿ ಲೋಕೇಶ್ ಎಂಬಾತ ಎಂದು ತಿಳಿದಿದ್ದು ಲೋಕೇಶ್ ನಿತ್ಯ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಪೆಟ್ರೋಲ್ ಹಾಕಿ ದಿನದ ವ್ಯಾಪಾರದ ಪುಸ್ತಕ ರಿಜಿಸ್ಟರ್ನಲ್ಲಿ ಲೆಕ್ಕ ಬರೆಯುತ್ತಿದ್ದರು. ಬಂಕ್ ಮಾಲೀಕರಿಗೆ ಕೆಲವು ದಿನಗಳಿಂದ ಈತನ ಮೇಲೆ ಅನುಮಾನ ಬರಲು ಪ್ರಾರಂಭಿಸಿದ್ದು ವ್ಯಾಪಾರದಲ್ಲಿ ಎಲ್ಲೊ ಹೆಚ್ಚು – ಕಮ್ಮಿ ಆಗಿದೆ ಎಂದು ತಿಳಿದಾಗ ರಿಜಿಸ್ಟರ್ ಲೆಕ್ಕಕ್ಕೂ ವ್ಯಾಪಾರಕ್ಕೂ ಹೋಲಿಕೆ ಇಲ್ಲದೇ ಇರುವಾಗ ಲೋಕೇಶ್ರವರನ್ನು ಕರೆದು ವಿಚಾರಿಸಿದಾಗ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಇದು ರಿಜಿಸ್ಟರ್ ಪುಸ್ತಕದ ಲೆಕ್ಕದಲ್ಲಿ 11ಲಕ್ಷ ರೂ. ದೋಖಾ ನಡೆದಿದೆ ಎಂದು ಹೇಳಲಾಗಿದೆ.
ಆನ್ಲೈನ್ ವಾಹಿವಾಟುಗಳಲ್ಲಿಯು 14 ಲಕ್ಷ ರೂ. ದೋಖಾ ಮಾಡಿದ ಲೋಕೇಶ್:
ಪೆಟ್ರೋಲ್ ಬಂಕ್ಗಳಲ್ಲಿ ಗೂಗಲ್ ಪೇ, ಪೋನ್ ಪೇ, ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದ್ದು ಪೆಟ್ರೋಲ್ ಡೀಸೆಲ್ ಹಾಕಿಸಿಕೊಂಡ ಜನರಿಗೆ ಲೋಕೇಶ್ರವರ ಬ್ಯಾಂಕ್ ಖಾತೆಯ ನಂಬರ್ ನೀಡುತ್ತಿದ್ದು ಬಂಕ್ ಮಾಲೀಕರ ಖಾತೆಗೆ ಹಣ ಜಮಾವಾಗುತ್ತಿರಲಿಲ್ಲ ಕಸ್ಟಮರ್ ಹಾಕುವ ಸಂದಾಯವಾಗುವ ಹಣವನ್ನು ಸಹ ತನ್ನ ಖಾತೆಗೆ ಜಮಾವಾಗುವಂತೆ ನೋಡಿಕೊಂಡು 13 ಲಕ್ಷಕ್ಕೂ ಅಧಿಕ ಹಣವನ್ನು ಆನ್ಲೈನ್ ಮೂಲಕ ಒಟ್ಟು 24 ಲಕ್ಷಕ್ಕಿಂತಲೂ ಅಧಿಕ ಹಣವನ್ನು ಲಪಟಾಯಿಸಿ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯು ಈ ವಂಚನೆಯನ್ನು ಸುಮಾರು ಆರು ತಿಂಗಳ ಹಿಂದೆ ಮಾಡಿದ್ದು ಈ ಬಗ್ಗೆ ಬಂಕ್ ಮಾಲೀಕ ಮಂಜಪ್ಪಗೌಡ ಲೋಕೇಶ್ರವರನ್ನು ವಿಚಾರಿಸಿದಾಗ ನಾನು ನಿಮಗೆ ಮೋಸ ಮಾಡಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡು ಲೋಕೇಶ್ ಜೊತೆಗೆ ದೊಡ್ಡಪ್ಪನ ಮಕ್ಕಳಾದ ಅರಣ್ ಹಾಗೂ ಅನಿಲ್ ಸಹ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿ ತಕ್ಷಣ ದೂರು ನೀಡುವುದು ಸರಿಯಲ್ಲ ಎಂದು ತಿಳಿದ ಬಂಕ್ ಮಾಲೀಕ ಮಂಜಪ್ಪಗೌಡ ಅವರ ಕುಟುಂಬಸ್ಥರನ್ನು ಕೇಳಿದಾಗ ತಪ್ಪು ನಡೆದಿದೆ ಆದ ನಷ್ಟವನ್ನು ಭರಿಸಿ ಕೊಡುವೆವು ಪೊಲೀಸ್ರಿಗೆ ದೂರು ನೀಡುವುದು ಬೇಡ ಎಂದು ಪುಸಲಾಯಿಸಿದ್ದಾರೆ. ಇದನ್ನು ನಂಬಿದ ಬಂಕ್ ಮಾಲೀಕ ಘಟನೆ ನಂತರ ಈಗ ಲೋಕೇಶ್ ಕಣ್ಮರೆಯಾಗಿದ್ದು ಕೆಲಸಕ್ಕೂ ಬಾರದೇ ದೋಖಾ ಮಾಡಿದ ಹಣವನ್ನು ಹಿಂತಿರುಗಿಸದೇ ನಾಪತ್ತೆಯಾಗಿದ್ದಾರೆ ಕುಟುಂಬಸ್ಥರಿಂದ ಹಣ ವಾಪಸ್ಸು ನೀಡುವ ಬಗ್ಗೆ ಪ್ರತಿಕ್ರಿಯೆ ಇಲ್ಲದೇ ಇದ್ದಾಗ ಹೊಸನಗರದ ಪೊಲೀಸ್ ಠಾಣೆಗೆ ಹಣ ವಂಚನೆಯ ಬಗ್ಗೆ ದೂರು ದಾಖಲಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಸಬ್ಇನ್ಸ್ಪೆಕ್ಟರ್ ರಾಜೇಂದ್ರ ನಾಯ್ಕ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳಾದ ಲೋಕೇಶ್ ಹಾಗೂ ಅನಿಲ್ ರವರನ್ನು ಬಂಧಿಸಿದ್ದು ಇನ್ನೊಬ್ಬ ಆರೋಪಿ ಅರುಣನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆರೋಪಿಯಿಂದ 50ಸಾವಿರ ಹಣ ವಸೂಲಾತಿ ಮಾಡಲಾಗಿದ್ದು ಉಳಿದ ಹಣ ಜಾಮೀನಿಗೆ ತೊಡಗಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
Related