23.2 C
Shimoga
Sunday, November 27, 2022

ಕೆ ಅಬ್ಬಿಗಲ್ ಶಾಲೆಯ ಸರ್ವೋತ್ತಮ ಶಿಕ್ಷಕ ಮಂಜುನಾಥ್ ರವರಿಗೆ ಸನ್ಮಾನ

ಹೊಸನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುವೀಡಿ ಅಬ್ಬಿಗಲ್ ನಲ್ಲಿ 2022-23ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವೀಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಒ ಹೆಚ್.ಆರ್ ಕೃಷ್ಣಮೂರ್ತಿ, ಶಿಕ್ಷಕರು ದೇಶ ಕಟ್ಟುವ, ಔಷಧ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತ್ರಿಣಿವೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯೆ ಲೀಲಾವತಿ, ಪಿ ಡಿ ಓ ರಂಜಿತಾ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್, ಖಜಾಂಚಿ ಪುಟ್ಟಸ್ವಾಮಿ, ಇ‌ ಸಿ ಓ ಗಳಾದ ಕರಿಬಸಪ್ಪ ಮತ್ತು ದುಗ್ಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಣಪ್ಪ, ಬ.ಮು.ಶಿ ಸುಶಿಲಮ್ಮ, ಮಲ್ಡಪ್ಪ, ಸೊನಲೆ ಮತ್ತು ಆರ್ ಸಿ ಪುರ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ನರಸಿಂಹ, ಸದಸ್ಯರುಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಶಿಲ್ಪಾ ಸ್ವಾಗತಿಸಿ, ಚೈತ್ರಾ ವಂದಿಸಿ, ಮೇಘರಾಜ್ ಕಾರ್ಯಕ್ರಮ ನಿರೂಪಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!