ಕೇಂದ್ರ-ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿ ; ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್

0
83

ರಿಪ್ಪನ್‌ಪೇಟೆ: ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿನ ಬಿಜೆಪಿಯ ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸಿ ಯಶಸ್ವಿಯಾಗಿ 8 ವರ್ಷ ಪೂರೈಸಿರುವುದು ಸಂತಸ ತಂದಿದೆ ಅಲ್ಲದೆ ರಾಜ್ಯದಲ್ಲಿ ಸಹ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ನೇತೃತ್ವದ ಸರ್ಕಾರ ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತರುವುದರೊಂದಿಗೆ ರಾಜ್ಯದ ಸರ್ವಾಂಗೀಣಾಭಿವೃದ್ದಿಯಲ್ಲಿ ಶ್ರಮಿಸುತ್ತಿರುವ ಸರ್ಕಾರದ ಕಾರ್ಯಕ್ರಮಗಳನ್ನು ಬಿಜೆಪಿ ಕಾರ್ಯಕರ್ತರು ಜನಪ್ರತಿನಿಧಿಗಳು ಬೂತ್ ಸಮಿತಿಯವರು ಮತದಾರರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಗವಟೂರು, ಬಸವಾಪುರ, ಕೆಂಚನಾಲ, ನೆವಟೂರು ಕೋಡೂರು ವ್ಯಾಪ್ತಿಯ ಗ್ರಾಮಗಳಲ್ಲಿನ ಬೂತ್ ಸಮಿತಿಯವರು ಆಯೋಜಿಸಲಾದ ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ 8 ವರ್ಷದ ಅವಧಿಯ ಆಡಳಿತದಲ್ಲಿ ಬಡವರ ರೈತ ಪರವಾದ ಯೋಜನೆಗಳಿಗೆ ಹೆಚ್ಚು ಆಧ್ಯತೆ ನೀಡಿದ್ದಾರೆ. ಸುಲಭವಾಗಿ ಆರೋಗ್ಯ ಸೇವೆ ದೊರಕಲು ಆಯುಷ್ಮಾನ್ ಆರೋಗ್ಯ ಯೋಜನೆ. ಬಡವರಿಗೆ ಉಚಿತ ಸಿಲಿಂಡರ್ (ಉಜ್ವಲ) ಯೋಜನೆ, ಪ್ರಧಾನಮಂತ್ರಿ ಕಿಸಾನ್‌ಸನ್ಮಾನ್, ಮಾತೃವಂದನಾ, ಫಸಲ್ ಭೀಮಾ ಯೋಜನೆ, ಸೇರಿದಂತೆ ಅಪಾರ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಜನಸಾಮಾನ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಪ್ರಧಾನಿಯಾಗಿ ನರೇಂದ್ರಮೋದಿಯವರು ಭಾರತದ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದು ವಿಶ್ವದಲ್ಲೇ ನಮ್ಮ ದೇಶವನ್ನು ಅತಿ ಎತ್ತರಕ್ಕೆ ತಗೆದುಕೊಂಡು ಹೋಗಿರುತ್ತಾರೆ.‌ ಧಾರ್ಮಿಕತೆಯನ್ನು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಲಾಗಿದೆ. ಪ್ರಪಂಚದ ಇತರ ದೇಶಗಳು ನಮ್ಮ ದೇಶದ ಕಡೆ ತಿರುಗಿ ನೋಡುವಂತೆ ಅನೇಕ ವಿನೂತನ ಕಾರ್ಯಗಳನ್ನು ದೇಶದಲ್ಲಿ ಮಾಡಲಾಗಿದೆ ರೈತ ಕಲ್ಯಾಣ ಕಾರ್ಯಕ್ರಮ ನವಭಾರತಕ್ಕೆ ನಾರಿಶಕ್ತಿ ಯುವಸಬಲೀಕರಣ ಮೂಲ ಸೌಕರ್ಯಗಳ ಪ್ರಮಾಣ ಗತಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಭಾರತದ ಮಣ್ಣಿನ ಮಹತ್ತವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕೆಲಸದಲ್ಲಿ ಮೋದಿಜೀಯವರ ಪರಿಶ್ರಮ ನಮ್ಮ ದೇಶದ ಹೆಮ್ಮೆ ಎಂದು ಹೇಳಿ ಇನ್ನೊಮ್ಮೆ ದೇಶದಲ್ಲಿ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಜಿಲ್ಲಾ ತಾಲ್ಲೂಕ್ ಗ್ರಾಮ ಮಟ್ಟದಲ್ಲಿ ಬಿಜೆಪಿ ಎಲ್ಲಕಡೆಯಲ್ಲಿ ಬಿಜೆಪಿ ರಾರಾಜಿಸುವಂತಾಗಲು ಕಾರ್ಯಕರ್ತರ ಪಡೆ ಸನ್ನದರಾಗಬೇಕು. ಆ ನಿಟ್ಟಿನಲ್ಲಿ ಕೇಂದ್ರದ ರಾಷ್ಟ್ರೀಯ ನಾಯಕರು ಜನಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ಸಭೆಯನ್ನು ನಡೆಸಿ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಹುರಿದುಂಬಿಸುವ ಕಾರ್ಯದಲ್ಲಿ ತೊಡಗುವಂತೆ ಮನವಿ ಮಾಡಿದರು.

ಈ ಸಭೆಯ ಅಧ್ಯಕ್ಷತೆಯನ್ನು ಗವಟೂರು ಬೂತ್ ಅಧ್ಯಕ್ಷ ವಾಸುಶೆಟ್ಟಿ ಗವಟೂರು ವಹಿಸಿದ್ದರು.

ಸಭೆಯಲ್ಲಿ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಬಿಳಗೋಡು ಗಣಪತಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ,‌ ಮಾಜಿ ಅಧ್ಯಕ್ಷರಾದ ಎ.ವಿ.ಮಲ್ಲಿಕಾರ್ಜುನ,‌ ಬಿ.ಯುವರಾಜ್,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್,‌ ತೀರ್ಥೇಶ್,‌‌ ಜಿ.ಡಿ.ಮಲ್ಲಿಕಾರ್ಜುನ, ಜಿ.ಎಲ್.ಸೋಮಶೇಖರ್, ಜಿ.ಎಂ.ದುಂಡರಾಜ್‌ಗೌಡ, ಎಂ ಸುರೇಶ್‌ಸಿಂಗ್, ಆನಂದ ಮೆಣಸೆ, ಕೆ.ಬಿ.ಹೂವಪ್ಪ, ಯೋಗೇಂದ್ರಗೌಡ, ವೀರೇಶ್ ಆಲವಳ್ಳಿ ಇನ್ನಿತರ ಹಲವರು ಹಾಜರಿದ್ದರು.

ಜಿ.ಡಿ.ಮಲ್ಲಿಕಾರ್ಜುನ ಸ್ವಾಗತಿಸಿದರು. ಬಿಳಗೋಡು ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಂಬಳ್ಳಿ ಗಿರೀಶ್ ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here