ಕೈಗಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನ

0
329

ಶಿವಮೊಗ್ಗ: ಗಾಜನೂರು ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಸೊರಬ, ರಿಪ್ಪನ್‍ಪೇಟೆ ಹಾಗೂ ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎನ್.ಸಿ.ವಿ.ಟಿ. ಅಡಿಯಲ್ಲಿ ಸಂಯೋಜನೆ ಹೊಂದಿರುವ ವೃತ್ತಿಗಳಿಗೆ 2022ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಎರಡು ವರ್ಷಗಳ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸುಟ್ರುಮೆಂಟ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರೀಷನ್, ಅಡ್ವಾನಸ್ಡ್ ಸಿಎನ್‍ಸಿ ಮೆಷಿನಿಂಗ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ಹಾಗೂ ಒಂದು ವರ್ಷದ ಸಿ.ಓ.ಪಿ.ಎ., ಇಂಡಸ್ಟ್ರೀಯಲ್ ರೊಬೋಟಿಕ್ಸ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಆಯಾ ಐ.ಟಿ.ಐ.ಗಳಲ್ಲಿ ನಿಗಧಿತ ನಮೂನೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 06/06/2022 ರೊಳಗಾಗಿ ಸಲ್ಲಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ-08182-234054, ತೀರ್ಥಹಳ್ಳಿ-08181-229450, ಶಿಕಾರಿಪುರ-08187-222559, ಸಾಗರ-8747824088, ಸೊರಬ-08184-270005, ರಿಪ್ಪನ್‍ಪೇಟೆ-9449804178 ಹಾಗೂ ಕಾರ್ಗಲ್-9880605897 ಗಳನ್ನು ಸಂಪರ್ಕಿಸುವುದು.

ಜಾಹಿರಾತು

LEAVE A REPLY

Please enter your comment!
Please enter your name here