ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ ನಿಯಮಿತ | ಆಡಳಿತ ಮಂಡಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ; ಚುನಾವಣಾಧಿಕಾರಿಗಳಿಂದ ಅಧಿಕೃತ ಘೋಷಣೆ

0
527

ಹೊಸನಗರ: ಇಲ್ಲಿನ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ನಿಯಮಿತ, ಎ.ಪಿ.ಎಂ.ಸಿ. ಯಾರ್ಡ್‌ಮಾವಿನಕೊಪ್ಪ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಮಂಗಳವಾರದಂದು ಸಹಕಾರಿ ಕಚೇರಿಯ ಮೊದಲನೇ ಮಹಡಿಯ ಕಟ್ಟಡದಲ್ಲಿ ನಿಗದಿಯಾಗಿತ್ತು.

ಹೆಚ್.ಎಂ ರಾಘವೇಂದ್ರ ಅಧ್ಯಕ್ಷರಾಗಿ ಮತ್ತು ಬಿ‌.ಪಿ ಈಶ್ವರಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿಗಳಾದ ಎಂ.ಅಂಜನ್ ಕುಮಾರ್ ಅಧಿಕೃತ ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಹೆಚ್.ಎಂ ರಾಘವೇಂದ್ರರವರು ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ನಿಯಮಿತವು ರೈತರ ಹಿತ ಕಾಯಲು ಸಿದ್ದವಾಗಿದೆ. ಎಲ್ಲ ಸದಸ್ಯರು, ನಿರ್ದೇಶಕರು ಮತ್ತು ಸಿಬ್ಬಂದಿಗಳು ಸಂಘದ ಅಭಿವೃಧ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಚುನಾಯಿತರಾದ ಹೆಚ್‌.ಎಂ ರಾಘವೇಂದ್ರ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಬಿ.ಪಿ ಈಶ್ವರಪ್ಪ ಮತ್ತು ನಿರ್ದೇಶಕರಾಗಿ ಚುನಾಯಿತರಾದ ಜಗದೀಶ ಹೆಚ್.ಪಿ, ರವಿ ಹೆಚ್.ಜಿ, ಪ್ರತೀಮಾ ಭಟ್, ಕೆ.ಎನ್ ಕೃಷ್ಣಮೂರ್ತಿ, ವಿದ್ಯಾ ಪೈ, ಗಣಪತಿ ಡಿ.ಆರ್, ಬಿ.ಸಿ ಆದಿತ್ಯ, ಎಂ.ಜಿ ರಾಮಚಂದ್ರ, ರಾಜಶೇಖರ ಹೆಚ್.ಸಿ ಇವರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಾಲಚಂದ್ರರವರು ಶುಭ ಹಾರೈಸಿದರು.

ಜಾಹಿರಾತು

LEAVE A REPLY

Please enter your comment!
Please enter your name here