ಕೊಡಚಾದ್ರಿ ತಪ್ಪಲಿಗೆ ಆಶೀಸರ ಭೇಟಿ ; ಪರಿಸರ ಸಂರಕ್ಷಣೆಗಾಗಿ ವನದೇವತೆಯಲ್ಲಿ ವಿಶೇಷ ಪ್ರಾರ್ಥನೆ, ಅಧಿಕಾರಿಗಳೊಂದಿಗೆ ಸಮಾಲೋಚನೆ

0
356

ಹೊಸನಗರ: ಕೊಡಚಾದ್ರಿ ಸಂರಕ್ಷಣೆ ಹಾಗೂ ವನವಾಸಿಗಳ ರಕ್ಷಣೆ ಕುರಿತಂತೆ ವನದೇವತೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಹಿನ್ನಲೆಯಲ್ಲಿ ವೃಕ್ಷಲಕ್ಷ ಆಂದೋಲನ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜೀವವೈವಿದ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಇಂದು ತಾಲೂಕಿನ ಕೊಡಚಾದ್ರಿ ಸಮೀಪದ ವಳೂರು ಗ್ರಾಮದ ಸೂಕ್ಮ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮದೇವತೆ ಚೌಡೇಶ್ವರಿ, ಜಲದುರ್ಗೆ ಹಾಗೂ ಶ್ರೀ ಶಂಕರಾಚಾರ್ಯ, ಶ್ರೀ ಶ್ರೀಧರ ಸ್ವಾಮೀಜಿ ಅವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಕರ ಸಂಕ್ರಮಣ ಹಿನ್ನಲೆಯಲ್ಲಿ ವನದೇವತೆಗೆ ಪೂಜೆ ಸಲ್ಲಿಸಲ್ಲಿ ಬಂದಿದ್ದ ಸ್ಥಳೀಯ ವನವಾಸಿಗಳು ಹಾಗೂ ರೈತಾಪಿಗಲೊಂದಿಗೆ ಅವರು ಸಮಾಲೋಚಿಸಿದರು. 80ರ ದಶಕದಲ್ಲಿ ತಾಲೂಕನ ನಿಟ್ಟೂರು, ಬಾಣಿಗ, ಹುಂಚ ಹಾಗೂ ಸಾಗರ ತಾಲೂಕಿನ ತುಮರಿ ಭಾಗದಲ್ಲಿ ಏಕ ಜಾತಿ ನೆಡುತೋಪುಗಳ ವಿರುದ್ದ ಜನ ಧ್ವನಿ ಎತ್ತಿ ಹೋರಾಟ ನಡೆಸಿ ಯಶಸ್ವಿ ಆಗಿದ್ದನ್ನು ಅವರು ಸ್ಮರಿಸಿದರು.

ಕೊಡಚಾದ್ರಿ ಬುಡದ ಗಣಿಗಾರಿಕೆ, ಅಂಬಾರು ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ನಡೆದ ಸಾಂಘಿಕ ಹೋರಾಟದ ಶ್ರಮವಾಗಿ, ಅಂಬಾರಗುಡ್ಡವು ‘ಸಂರಕ್ಷಣಾ ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಸರ್ಕಾರ ಘೋಷಿಸಿ ದಶಕಗಳೇ ಕಳೆದಿದೆ ಎಂದು ಹೋರಾಟಕ್ಕೆ ಸಾಥ್ ನೀಡಿದ್ದ ವನವಾಸಿಗಳ ಪರಿಶ್ರಮವನ್ನು ಅವರ ನೆನೆದರು.

ನಂತರ ಅವರು, ಹೊಸನಗರ ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಅರಣ್ಯ ಸಂರಕ್ಷಣೆ, ಭೂ ಕುಸಿತ ತಡೆ, ಅರಣ್ಯ ಕಾನೂನು ರಕ್ಷಣೆ, ಅರಣ್ಯ ಒತ್ತುವರಿ ತಡೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಅರಣ್ಯ ಅಧಿಕಾರಿಗಳು ಹಾಗೂ ಪರಿಸರಾಸಕ್ತರೊಂದಿಗೆ ಸಮಾಲೋಚನೆ ನಡೆಸಿದರು.

ತಾಲೂಕಿನ ನಗರ ಹಾಗೂ ಹೊಸನಗರ ವಲಯ ಅರಣ್ಯ ಪ್ರದೇಶದಲ್ಲಿ ಕೆಪಿಸಿ ಭೂ ಭಾಗದ ಸಹ ಸುಮಾರು ತಲಾ 250 ಹೆಕ್ಟೆರ್ ನಷ್ಟಿದ್ದು, ಕೃಷಿ ಚಟುವಟಿಕೆ ವಿನಃ ಅಕ್ರಮ ಭೂ ಒತ್ತುವರಿ ತಡೆಯಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಅನಧಿಕೃತ ಗಣಿಗಾರಿಕೆ, ಕ್ವಾರಿಗಳ ಅನುಷ್ಠಾನಕ್ಕೆ ತಡೆಗೆ ಸೂಕ್ತ ಕ್ರಮಕ್ಕೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಹೊಸನಗರ ಆರ್‌ಎಫ್‌ಓ ಮಧುಕರ್, ನಗರ ಆರ್‌ಎಫ್‌ಓ ಆದರ್ಶ, ಪರಿಸರಾಸ್ತರಾದ ಚಕ್ರವಾಕ ಸುಬ್ರಹ್ಮಣ್ಯ, ಹನಿಯ ರವಿ, ಸುರೇಶ್ ಹುಂಚ, ಗಣಪತಿ ಶಿರಸಿ, ಕವಲಕೋಡು ವೆಂಕಟೇಶ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here