ಹೊಸನಗರ: ರಾಜ್ಯದ ಪ್ರಸಿದ್ಧ ದೇವಾಲಯ ಮತ್ತು ಪ್ರವಾಸಿ ತಾಣವಾದ ನಗರ ಹೋಬಳಿ ಕಟ್ಟಿನಹೊಳೆ ಗ್ರಾಮದ ಕೊಡಚಾದ್ರಿಯ ಶ್ರೀ ಪರ್ವತೇಶ್ವರ ದೇವಸ್ಥಾನ ಮತ್ತು ಹುಲಿರಾಯ ದೇವಸ್ಥಾನದ ನೂತನ ಸಮಿತಿಯು ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ರಚನೆಯಾಗಿದ್ದು, ಸಂಪದಮನೆ ಶಿವರಾಮಶೆಟ್ಟಿ ಯವರು ನೂತನ ಸಮಿತಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
