ಕೊನೆಗೂ ಎಸಿಬಿ ಬಲೆಗೆ ಬಿದ್ದ ಎಂ. ಗುಡ್ಡೇಕೊಪ್ಪ ಗ್ರಾಪಂ ಪಿಡಿಒ !

0
4069

ಹೊಸನಗರ : ಇಲ್ಲಿನ ಎಂ.ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿ ಪಿಡಿಒ ಮುರುಗೇಶ್ ಕೊನೆಗೂ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಇಂದು ಬೆಳಗ್ಗೆ ಕೋಡೂರು ಗ್ರಾಪಂ ವ್ಯಾಪ್ತಿಯ ಕುಸಗುಂಡಿ ಗ್ರಾಮದ ಸಿದ್ದಗಿರಿ ನಿವಾಸಿ ಫೋಟೋಗ್ರಾಫರ್ ಸತೀಶ್ ರವರ ಬಳಿ ಮುರುಗೇಶ್ 30 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ‌ ಬಿದ್ದಿದ್ದಾನೆ.

ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮ್ಯುಟೇಷನ್ ಮತ್ತು‌ 9 & 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಕೆಲಕ್ಕೆ ಪಿಡಿಒ ಮುರುಗೇಶ್ 2 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದನು.

ಲಂಚದ ಬಾಬ್ತಾಗಿ ಮೊದಲನೇ ಕಂತು 20 ಸಾವಿರ ರೂ. ಲಂಚವನ್ನ ಮುರುಗೇಶ್ ಮೊದಲೇ ಪಡೆದಿದ್ದನು. ಎರಡನೇ ಕಂತಾಗಿ ಇಂದು 30 ಸಾವಿರ ರೂ. ಲಂಚವನ್ನು ಇಂದು ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಈ ಕಾರ್ಯಾಚರಣೆಯಲ್ಲಿ ಪೂರ್ವವಲಯ ದಾವಣಗೆರೆಯ ಪೊಲೀಸ್ ಅಧೀಕ್ಷಕರಾದ ಜಯಪ್ರಕಾಶ್‌ರವರ ಮಾರ್ಗದರ್ಶನದಲ್ಲಿ ಮತ್ತು ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಜೆ. ಲೋಕೇಶ, ಇವರ ನೇತೃತ್ವದಲ್ಲಿ ನಡೆದಿದೆ.

ತಂಡದಲ್ಲಿ ಡಿವೈಎಸ್‌ಪಿ, ಜೆ. ಲೋಕೇಶ, ಮತ್ತು ಶ್ರೀ ಇಮ್ರಾನ್ ಬೇಗ್, (ತನಿಖಾಧಿಕಾರಿ) ಪೊಲೀಸ್ ಇನ್ಸ್‌ಪೆಕ್ಟರ್‌, ಹಾಗೂ ಪೊಲೀಸ್ ಸಿಬ್ಬಂದಿಗಳಾದ ವಸಂತ ಕಾಯಕದ, ನಾಗರಾಜ, ರಘುನಾಯ್ಕ, ಸುರೇಂದ್ರ, ಅರುಣ್‌ಪವಾರ್, ಯೋಗೇಶ್ವರಪ್ಪ, ಚರಣ್‌ರಾಜ್‌, ಇವರುಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here