ಕೊರೊನಾ ಟೈಮ್’ನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ? ಅಧಿಕಾರಿಗಳ ಕಾರು ತಡೆದು ಘೇರಾವ್ ಹಾಕಿದ ಗ್ರಾಮಸ್ಥರು! ಎಲ್ಲಿ ಇದು?

0
684

ತರೀಕೆರೆ: ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಕಾರಣದಿಂದ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜನರು ಯಾರೂ ಅನಗತ್ಯವಾಗಿ ಓಡಾಡುವಂತಿಲ್ಲ ಎಂದು ನಿಯಮ ಮಾಡಲಾಗಿದೆ. ನಿಯಮ ಮೀರಿದವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಕಾಫಿನಾಡು ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳಿಗೆ ಮಾತ್ರ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಜನತೆಗೆ ಕಾಡುತ್ತಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕಾಫಿನಾಡಿನ ಅಧಿಕಾರಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ. ತರೀಕೆರೆ ತಾಲೂಕಿನ ಸಂತವೇರಿ ಬಳಿ, ಪಾರ್ಟಿಗೆಂದು ತೆರಳಲು ಹೊರಟಿದ್ದ ಅರಣ್ಯಾಧಿಕಾರಿಗಳಿಗೆ ತಡೆ ಹಾಕಿ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

ನಿನ್ನೆ ಹಿರಿಯ ಅಧಿಕಾರಿಗಳ ತಂಡ ಹತ್ತಕ್ಕೂ ಹೆಚ್ಚು ಕಾರು-ಜೀಪುಗಳಲ್ಲಿ ಚಿಕ್ಕಮಗಳೂರಿನಿಂದ ಸಂತವೇರಿ ಸಮೀಪದ ‘ಗೇಮ್ ಫಾರೆಸ್ಟ್’ಗೆ ಹೊರಟಿತ್ತು. ಈ ವೇಳೆ ವಾಹನಗಳನ್ನ ತಡೆದ ಗ್ರಾಮಸ್ಥರು, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದೆ. ಗಾಡಿಗಳನ್ನ ಬಿಡಬೇಡಿ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ. ಒಂದೋ ಎರಡೋ ಗಾಡಿಗಳು ಹೋದ್ರೆ ಪರವಾಗಿಲ್ಲ. ಆದ್ರೂ 10-15 ಗಾಡಿಗಳು ಹೋಗ್ತಿವೆ. ಕೊರೊನಾ ಟೈಮಿನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೇ ಅಧಿಕಾರಿಗಳು ವಾಪಸ್ ಆಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here