ಕೊರೊನಾ ಸೋಂಕಿಗೆ ತುತ್ತಾಗಿ ಸಾವಿಗೀಡಾದ ಕುಟುಂಬದವರ ಅನುಪಸ್ಥಿತಿಯಲ್ಲಿ ಶವಸಂಸ್ಕಾರ ಮಾಡಿದ 5 ಆತ್ಮಗಳಿಗೆ ಹಿಂದೂ ಸಂಪ್ರದಾಯದಂತೆ ಸದ್ಗತಿ!

0
590

ತೀರ್ಥಹಳ್ಳಿ: ಕೊರೊನಾ ರೋಗ ಉಲ್ಬಣಗೊಂಡ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾದವು ಅವುಗಳಲ್ಲಿ ಅತಿ ಮುಖ್ಯ ರೋಗದಿಂದ ಮರಣ ಹೊಂದಿದವರ ಶವಸಂಸ್ಕಾರ ಮಾಡುವ ಬಗ್ಗೆ ಅನೇಕರಿಗೆ ಸಮಸ್ಯೆಗಳು, ಕೆಲವು ಕುಟುಂಬದವರೇ ಶವಸಂಸ್ಕಾರಕ್ಕೆ ಬಾರದಂಥ ಸ್ಥಿತಿ ನಮ್ಮ ಮುಂದಿತ್ತು. ಇಂತಹ ಸಮಯದಲ್ಲಿ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ, ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸುಭಾಷ್ ಮತ್ತು ಹೇಮಂತ್ ಇವರುಗಳು ಸುಮಾರು 60 ಶವಗಳನ್ನು ಹಿಂದೂ ಸಂಪ್ರದಾಯದಂತೆ ತೀರ್ಥಹಳ್ಳಿ ತುಂಗಾ ನದಿ ದಡದಲ್ಲಿರುವ ಶವಾಗಾರದಲ್ಲಿ ಅಂತಿಮ ಕ್ರಿಯೆ ನಡೆಸಿದ್ದರು. ಅವುಗಳಲ್ಲಿ ಸುಮಾರು 5 ಶವಗಳನ್ನು ಕುಟುಂಬದವರ ಸಹಕಾರವಿಲ್ಲದೆ ನಡೆಸಲಾಗಿತ್ತು. ಆ 5 ಆತ್ಮಗಳ ಬಗ್ಗೆ ತೀರ್ಥಹಳ್ಳಿ ಪುತ್ತಿಗೆ ಮಠದ ಎದುರು ತುಂಗಾ ನದಿಯಲ್ಲಿ ಹಿರಿಯ ಪುರೋಹಿತರಾದ ಸುಬ್ರಹ್ಮಣ್ಯ ಭಟ್ ರವರ ಉಪಸ್ಥಿತಿ ಮಾರ್ಗದರ್ಶನ ಅಸ್ಥಿ ವಿಸರ್ಜನೆಯನ್ನು ಮಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ತೀರ್ಥಹಳ್ಳಿ ಇತಿಹಾಸದಲ್ಲೇ ಇದೊಂದು ಮಾದರಿ ಕೆಲಸವನ್ನಾಗಿ ನೆರೆವೇರಿಸಿದರು.

ಅತ್ಯಂತ ಧಾರ್ಮಿಕ ವಿಧಿವಿಧಾನಗಳಿಂದ ಮರಣ ಹೊಂದಿದವರ ನಿರ್ಲಕ್ಷ್ಯ ಮಾಡಿದಂತಹ 5 ಜನರ ಶವ ಸಂಸ್ಕಾರವನ್ನು ನಡೆಸಿ ನಂತರ ಆಸ್ತಿಗಳ ವಿಸರ್ಜನೆ ಕ್ರಿಯೆ ಮಾಡಿರುವುದು ಮಾಡಿರುವುದು ಎಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕುಟುಂಬದವರ ಶವಸಂಸ್ಕಾರ ಮತ್ತು ಕ್ರಿಯೆಗಳನ್ನು ನಡೆಸಲು ಕುಟುಂಬ ವರ್ಗದವರೇ ಹಿಂದೇಟು ಹಾಕುತ್ತಿರುವ ಈ ಸಮಯದಲ್ಲಿ ಇದೊಂದು ಉತ್ತಮ ನಡವಳಿಕೆಯಾಗಿರುತ್ತದೆ.

ವರದಿ: ಲಿಯೋ ಅರೋಜ

ಜಾಹಿರಾತು

LEAVE A REPLY

Please enter your comment!
Please enter your name here