ಕೋಟಿ ರೂ. ವೆಚ್ಚದಲ್ಲಿ ಹೊಸನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ ಯುವಪಡೆ !

0
565

ಹೊಸನಗರ: ಪಟ್ಟಣದ ನಗರ ರಸ್ತೆಯ ಗುರುಶಕ್ತಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನ ಗರ್ಭಗುಡಿ ಮಾತ್ರ ರಚನೆಯಾಗಿ ಉಳಿದ ಕಾಮಗಾರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು ಆ ಭಾಗದ ಯುವಪಡೆ ಸಂಘಟಿತರಾಗಿ ಹೊಸನಗರ ಪಟ್ಟಣದ ಗಣಪತಿ ದೇವಸ್ಥಾನದ ಸೇವಾ ಸಮಿತಿ, ದುರ್ಗಾಂಬ ದೇವಸ್ಥಾನ ಸಮಿತಿ, ಮಾರಿಕಾಂಬ ಸೇವಾ ಸಮಿತಿ, ನಾಗಶ್ರೀ ಸೇವಾ ಸಮಿತಿ, ಗಂಗಾಧರೇಶ್ವರ ದೇವಸ್ಥಾನ ಸಮಿತಿ, ವಿಶ್ವ ಹಿಂದೂ ಪರಿಷತ್, ಹಿಂದೂ ಮಹಾಸಭಾ ಸಂಘಟನೆಗಳು, ಎನ್.ಆರ್ ದೇವಾನಂದ್, ಎಂ.ಎನ್ ಸುಧಾಕರ್, ವಿಜೇಂದ್ರಶೇಟ್, ಹೆಚ್.ಎನ್. ಶ್ರೀಪತಿ ರಾವ್, ಸುದೇಶ್ ಕಾಮತ್, ಎಂ.ಕೆ ವಿಷ್ಣುಮೂರ್ತಿ, ವಾದಿರಾಜ್ ಎನ್., ನಾಗರಾಜ್, ವೀರಾಂಜನೇಯ ಸ್ವಾಮಿ ಟ್ರಸ್ಟ್‌ನ ಮಹೇಶ್, ವಿನಯ್ ಕುಮಾರ್, ಪ್ರಸನ್ನ, ಆನಂದ್ ಮೊದಲಾದವರು ಉಪಸ್ಥಿತರಿದ್ದು ಶಿಲ್ಪಕಲಾ ಚತುರ ಮುರ್ಡೇಶ್ವರದ ಈಶ್ವರ ರವರಿಗೆ ವೀಳ್ಯ ನೀಡುವ ಮೂಲಕ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು.

ಈ ದೇವಸ್ಥಾನಕ್ಕೆ 1978 ರಲ್ಲಿ ಶಿಲಾನ್ಯಾಸಗೈದಿದ್ದು 2005ರಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವರ್ಗಗಳು ಗರ್ಭಗುಡಿ ನಿರ್ಮಾಣಕ್ಕೆ ಚಾಲನೆ ನೀಡಿ 2008ರಲ್ಲಿ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಪ್ರತಿದಿನ ಪೂಜೆ-ಪುನಸ್ಕಾರ ಹೋಮ – ಹವನ ಶುಭಕಾರ್ಯಗಳ ನೆರವೇರಿದ ಬಂದಿದ್ದು ಭಕ್ತಾದಿಗಳಾದ ಸಾರ್ವಜನಿಕರ ಸಹಾಯದಿಂದ ನೆರವಿನಿಂದ 45 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಾಂಗಣ ನಿರ್ಮಾಣವಾಗಿದೆ.

ಇದೀಗ ದೇವಸ್ಥಾನ ಪೂರ್ಣ ರೂಪ ಹೊಂದಲು ಅರ್ಧ ಕೋಟಿ ರೂಗಳ ಅವಶ್ಯಕತೆಯಿದೆ ಸರ್ಕಾರದಿಂದ ಈವರೆಗೆ ಯಾವುದೇ ನೆರವು ಭಾರದ ಕಾರಣ ಮೇಲ್ಕಾಣಿಸಿದ ಈ ಹಣ ಭಕ್ತವೃಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here