ಕೋಟ್ಯಂತರ ಜನರ ಹೋರಾಟದ ಪ್ರತಿಫಲವೆ ಸ್ವಾತಂತ್ರ್ಯ ; ಮಳಲಿ ಶ್ರೀಗಳು

0
183

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಭವ್ಯ ಭಾರತವನ್ನು ಭದ್ರಗೊಳಿಸೋಣ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನೀಯರ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಯುವಜನರಿಗೆ ಪ್ರೇರಣಾ ಶಕ್ತಿ ಎಂದು ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಗಿಣಿವಾರದ ಕೊಡಚಾದ್ರಿ ಎಜುಕೇಷನ್‌ಮತ್ತು ಚಾರಿಟಬಲ್ ಟ್ರಸ್ಟ್ (ರಿ) ನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೋಟ್ಯಂತರ ಜನರ ಪರಿಶ್ರಮದ ಫಲವೇ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಂತೋಷ ಸಂಭ್ರಮದಿಂದ ಭಕ್ತಿ ಭಾವದಿಂದ ಆಚರಿಸುತ್ತದ್ದೇವೆಂದು ಹೇಳಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸತ್ಪ್ರಜೆಗಳಾಗಿ ಬೆಳೆದು ದೇಶಾಭಿಮಾನ ಬೆಳಸಿಕೊಳ್ಳುವಂತೆ ನುಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಕೆ.ಆರ್,ಪ್ರಕಾಶ್, ಇಂಧೂದರಗೌಡರು, ಜಿ.ವಿ.ನವೀನ, ಸುವರ್ಣ ಟೀಕಪ್ಪ, ರಾಜೇಂದ್ರ ಅವಿನಳ್ಳಿ, ವಿರೂಪಾಕ್ಷ ಗಿಣಿವಾರದ ಗ್ರಾಮಸ್ಥರು ಶಾಲಾ ಶಿಕ್ಷಕ ವೃಂದ ಶಾಲಾಭಿವೃದ್ದಿ ಸಮಿತಿಯವರು ಹಾಗೂ ವಿದ್ಯಾರ್ಥಿ ಪೋಷಕರು ವಿದ್ಯಾರ್ಥಿ ಸಮೂಹ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here