ಕೋಡೂರಿನಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕನನ್ನು 90 ನಿಮಿಷದಲ್ಲಿ ಹೊಸನಗರದಿಂದ ಮಣಿಪಾಲಕ್ಕೆ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿದ ಅಂಬುಲೆನ್ಸ್ ಚಾಲಕ ಬಾಲು..!

0
5644

ಹೊಸನಗರ: ತಾಲ್ಲೂಕಿನ ಕೋಡೂರು ಎಂಬಲ್ಲಿ ಕಾರು ಹಾಗೂ ಬೈಕ್ ನಡುವೆ ಇಂದು ಮಧ್ಯಾಹ್ನ 3.40 ರ ವೇಳೆ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡ ಬೈಕ್ ಸವಾರ ಕೋಡೂರು ಸಮೀಪದ ಯಳಗಲ್ಲಿನ ಚೂಡಮಣಿ (35) ಎಂಬಾತನಿಗೆ ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಅಂಬುಲೆನ್ಸ್ ಮೂಲಕ ಕಳಿಸಿಕೊಡಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್, ಸಾರ್ವಜನಿಕ ಆಸ್ಪತ್ರೆಯ ಡಾ. ಲಿಂಗರಾಜ್ ಉಪಸ್ಥಿತರಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆ ಅಂಬುಲೆನ್ಸ್ ನಲ್ಲಿ ಉಡುಪಿಯ ಮಣಿಪಾಲಕ್ಕೆ ಕಳಿಸಿ ಕೊಟ್ಟರು.

ಅಂಬುಲೆನ್ಸ್ ಚಾಲಕ ಬಾಲು ಈ ಪರಿಸ್ಥಿತಿ ಮನಗಂಡು ಜೀರೋ ಟ್ರಾಫಿಕ್ ವ್ಯವಸ್ಥೆಯಂತೆ ಅಂಬುಲೆನ್ಸ್ ಚಾಲನೆ ಮಾಡಿ ನೂರಕ್ಕೂ ಹೆಚ್ಚು ಕಿಲೋ ಮೀಟರ್ ದೂರದ ಮಣಿಪಾಲಕ್ಕೆ ತೆರಳಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ತಿಳಿದುಬಂದಿದೆ.

ಈ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸನಗರ ಹಾಗೂ ಸುತ್ತಮುತ್ತಲಿನ ಸುದ್ದಿಗಳಿಗಾಗಿ ಸಂಪರ್ಕಿಸಿ: 8277173177
ಜಾಹಿರಾತು

LEAVE A REPLY

Please enter your comment!
Please enter your name here