23.2 C
Shimoga
Sunday, November 27, 2022

ಕೋಡೂರು ಗ್ರಾಪಂ ಮಟ್ಟದ ಗ್ರಾಮೀಣ ಕ್ರೀಡಾಕೂಟ – 2022 |ಕ್ರೀಡೆಯಿಂದ ಸಾಮರಸ್ಯ ಭಾವನೆ ಬೆಳೆಯಲು ಸಹಕಾರಿ ; ಜಯಪ್ರಕಾಶ್ ಶೆಟ್ಟಿರಿಪ್ಪನ್‌ಪೇಟೆ: ಕ್ರೀಡೆಯಿಂದ ನಮ್ಮನಲ್ಲಿರುವ ದ್ವೇಷ ಅಸೂಯೆ ದೂರವಾಗುವುದು. ಸೋಲು-ಗೆಲುವು ಮುಖ್ಯವಾಗದೇ ಎಲ್ಲೂರು ಒಂದಾಗಿ ಪಾಲ್ಗೊಳ್ಳುವುದು ಮುಖ್ಯವೆಂದು ಕೋಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ ಹೇಳಿದರು.

ಕೋಡೂರು ಗ್ರಾಮ ಪಂಚಾಯ್ತಿಯಿಂದ ರಾಜ್ಯದ ಮುಖ್ಯಮಂತ್ರಿಗಳು ಗ್ರಾಮೀಣ ಕ್ರೀಡೆಯನ್ನು ಉತ್ತೇಜಿಸುವ ಮಹಾತ್ವಾಕಾಂಕ್ಷಿ ಕಾರ್ಯಕ್ರಮದನ್ವಯ ಆಯೋಜಿಸಲಾದ ಗ್ರಾಮೀಣ ಕ್ರೀಡಾಕೂಟ 2022 ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ರೀಡೆಯಿಂದ ಸಾಮರಸ್ಯ ಭಾವನೆ ಬೆಳೆಯಲು ಸಹಕಾರಿಯಾಗಿದೆ.

ವಿನಾಶದತ್ತ ಸಾಗಿರುವ ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ. ಇಂದಿನ ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗುತ್ತಿದ್ದು ದೈಹಿಕ ಸಾಮರ್ಥ್ಯವೆ ಇಲ್ಲದವರಂತಾಗಿದ್ದಾರೆಂದು ವಿಷಾದ ವ್ಯಕ್ತಪಡಿಸಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದೆಂದರು.


ಕ್ರೀಡಾಕೂಟವನ್ನು ಗ್ರಾ.ಪಂ.ಅಧ್ಯಕ್ಷೆ ಸುನಂದ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.

ಪುರುಷರಿಗೆ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಹಗ್ಗ-ಜಗ್ಗಾಟ, ವಾಲಿಬಾಲ್, ಎತ್ತಿನಗಾಡಿ ಓಟ ಹಾಗೂ ಮಹಿಳೆಯರಿಗೆ ಖೋ-ಖೋ, ಹಗ್ಗ ಜಗ್ಗಾಟ, ಥ್ರೋಬಾಲ್ ಇನ್ನಿತರ ಅಟೋಟಗಳು ಆಕರ್ಷಣೆಯಾಗಿತ್ತು. ಮನರಂಜನಾ ಕ್ರೀಡೆಗಳಾಗಿ ಸೋಬಾನೆ ಪದ, ಕೋಲಾಟ ಮತ್ತು ಡೊಳ್ಳು ಕುಣಿತ ಆಯೋಜಿಸಲಾಗಿತ್ತು.

ಗ್ರಾಪಂ ಸದಸ್ಯರಾದ ಅನ್ನಪೂರ್ಣ ಮಹೇಶ, ಶೇಖರಪ್ಪ ಎಲ್, ಚಂದ್ರಕಲಾ, ಯೋಗೇಂದ್ರಪ್ಪ, ರೇಖಾ, ಸುಧಾಕರ, ಪ್ರೀತಿ, ಉಮೇಶ್, ಮಂಜಪ್ಪ, ಶ್ಯಾಮಲಾ, ಸವಿತಾ ಮತ್ತು ಸಿಬ್ಬಂದಿ ವರ್ಗದವರು, ಇನ್ನಿತರರು ಹಾಜರಿದ್ದರು.


ರತ್ನಮ್ಮ ಪ್ರಾರ್ಥಿಸಿದರು. ಪಿಡಿಓ ನಾಗರಾಜ್ ಸ್ವಾಗತಿಸಿದರು. ಸಿಆರ್‌ಸಿ ಪ್ರದೀಪ್ ನಿರೂಪಿಸಿದರು. ಸಿದ್ದಗಿರಿ ಶಾಲೆಯ ಶಿಕ್ಷಕಿ ಉಷಾ ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!