24.3 C
Shimoga
Friday, December 9, 2022

ಕೋಡೂರು ; ನೇಣಿಗೆ ಶರಣಾದ ಗಾರೆ ಕೆಲಸಗಾರ !

ರಿಪ್ಪನ್‌ಪೇಟೆ : ಕೋಡೂರು ಗ್ರಾಮದ ಇಂದಿರಾನಗರ ನಿವಾಸಿ ಸತೀಶ್ (35) ತನ್ನ ಮನೆಯಲ್ಲಿಯೇ ಇಂದು ಸಂಜೆ 4 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಗಾರೆ ಕೆಲಸ ಮಾಡಿಕೊಂಡಿದ್ದ ಈತ ಮಾನಸಿಕವಾಗಿ ನೊಂದಿದ್ದ. ಕಳೆದ ಮೂರು ದಿನಗಳ ಹಿಂದಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿ ಕೇಶ ಮುಂಡನ ಮಾಡಿಸಿಕೊಂಡು ಬಂದಿದ್ದ ಎಂದು ತಿಳಿದುಬಂದಿದೆ.

ಪತ್ನಿ, ಇಬ್ಬರು (ಪುತ್ರಿ, ಪುತ್ರ) ಚಿಕ್ಕ ಮಕ್ಕಳನ್ನು ಹಾಗೂ ಸಹೋದರ ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹಿತರನ್ನು ಈತ ಅಗಲಿದ್ದಾನೆ.

ಮೃತನ ಮರಣೋತ್ತರ ಪರೀಕ್ಷೆ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದು, ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!