ಕೋಡೂರು ; ಮಕ್ಕಳ ಗ್ರಾಮಸಭೆಯಲ್ಲಿ ಅಂಗನವಾಡಿ ಪುಟಾಣಿಗಳ ಹಕ್ಕೊತ್ತಾಯ | “ಎಲ್.ಕೆ.ಜಿ., ಯು.ಕೆ.ಜಿ ಬೇಡ ಅಂಗನವಾಡಿ ಕೇಂದ್ರವೇ ಸಾಕು” !

0
603

ರಿಪ್ಪನ್‌ಪೇಟೆ: ಸರ್ಕಾರ ಮತ್ತು ಖಾಸಗಿ ಕಾನ್ವೆಂಟ್‌ಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಆರಂಭಿಸಲಾಗುತ್ತಿರುವ ಬಗ್ಗೆ ಅಂಗನವಾಡಿ ಪುಟಾಣಿಗಳು, ನಮಗೆ ಅಂಗನವಾಡಿ ಸಾಕು ಎಲ್.ಕೆ.ಜಿ, ಯು.ಕೆ.ಜಿ ಬೇಡಾಸ ಎಂದು ಹಕ್ಕೊತ್ತಾಯ ಮಂಡಿಸುವ ಮೂಲಕ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿ ವರ್ಗವನ್ನು ಮೂಕವಿಸ್ಮಯರನ್ನಾಗಿಸಿದರು.

ಕೋಡೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇಂದು ಆಯೋಜಿಸಲಾದ ‘ಮಕ್ಕಳ ಸ್ನೇಹ ಗ್ರಾಮ ಪಂಚಾಯ್ತಿ’ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಅಂಗನವಾಡಿ ಪುಟಾಣಿ ಮಕ್ಕಳು ತಮ್ಮ ಅಂಗನವಾಡಿಯಲ್ಲಿನ ಸಮಸ್ಯೆಗಳನ್ನು ಬಿಡಿಸಿಟ್ಟರು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಕೋಡೂರು ಪ್ರೌಢಶಾಲೆಯ ವಿದ್ಯಾರ್ಥಿ ನಂದನ್ ಕುಮಾರ ವಹಿಸಿದ್ದರು.

ಸಭೆಯಲ್ಲಿ ಸರ್ಕಾರಿ ಉರ್ದು ಶಾಲೆ ಬಿಸಿಯೂಟ ಕೊಠಡಿಯೊಂದಿಗೆ ದಾಸ್ತಾನು ಕೊಠಡಿಯಿಲ್ಲದೆ ಇರುವುದು ಮತ್ತು ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟವನ್ನು ಶಾಲಾ ಕಾರಿಡಾರ್ ನಲ್ಲಿ ಕುಳಿತು ಊಟ ಮಾಡಬೇಕು. ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತದೆಂದು ವಿದ್ಯಾರ್ಥಿಗಳು ವಿವರಿಸಿ ತಕ್ಷಣ ಮಾಡಿಕೊಡುವಂತೆ ಮನವಿ ಮಾಡಿದರು.

ಅಳ್ಳಿಕೇವಿ ಸರ್ಕಾರಿ ಶಾಲೆ ಆವರಣದೊಳಗೆ ಪವರ್‌ಲೈನ್ ವಿದ್ಯುತ್ ಕಂಬ ಹಾದು ಹೋಗಿದೆ ಇದರಿಂದಾಗಿ ಮಕ್ಕಳು ಪೋಷಕ ವರ್ಗ ಜೀವ ಭಯದಿಂದ ನೋಡುವಂತಾಗಿದೆ ಈ ಕಂಬವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವಂತೆ ಸುತ್ತಮುತ್ತಲಿನ ಹಲವು ಶಾಲೆಗಳಲ್ಲಿ ಗಣಕಯಂತ್ರಗಳು ಶೌಚಾಲಯಗಳು ಆಟದ ಮೈದಾನಗಳು ಕಾಂಪೌಂಡ್ ರಂಗಮಂದಿರಗಳು ಹಾಳಾಗಿ ಹೋಗಿವೆ ಎಂದು ಸಮಸ್ಯೆಗಳ ಕುರಿತು ವಿದ್ಯಾರ್ಥಿನಿ ಕು|| ನಯನ ಗಮನ ಸೆಳೆದರು.

ಈ ಹಿಂದೆ ಸರ್ಕಾರ ಶುಚಿ ಪ್ಯಾಡ್ ನೀಡುತ್ತಿದ್ದು ಇದರಿಂದ ಹೆಣ್ಣು ಮಕ್ಕಳಲ್ಲಿ ಶುಚಿತ್ವದೊಂದಿಗೆ ಉತ್ತಮ ಆರೋಗ್ಯ ಹೆಣ್ಣು ಮಕ್ಕಳಲಿ ಯಾವುದೇ ಸಮಸ್ಯೆಯಾಗುತ್ತಿರಲ್ಲಿಲ್ಲ ಈಗ ಅದನ್ನು ನಿಲ್ಲಿಸಿದ್ದಾರೆ ಅದನ್ನು ಕೊಡುವ ವ್ಯವಸ್ಥೆ ಮಾಡಬೇಕು. ಶಿಕ್ಷಕರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡಲಿ ಅಂಗನವಾಡಿ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳವರು ಸೆಳೆಯುವುದನ್ನು ತಪ್ಪಿಸಿ ತಮ್ಮ ಶಾಲೆಗಳಿಗೆ ದಾಖಲಿಸುವಂತೆ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಸಲು ಸಾಧ್ಯವಾಗುವುದೆಂದು ಅಂಗನವಾಡಿ ಸೂಪರ್‌ವೈಜರ್ ವನಮಾಲ ಹೇಳಿದರು.

ಕೋಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಯಪ್ರಕಾಶ್‌ಶೆಟ್ಟಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಆಡಳಿತಾತ್ಮಕ ಅರಿವು ಮೂಡಿಸಲು ಸರ್ಕಾರ ಉತ್ತಮ ವೇದಿಕೆ ರಚಿಸಿದ್ದು ಇದರಿಂದಾಗಿ ಗ್ರಾಮ ವ್ಯಾಪ್ತಿಯಲ್ಲಿನ ಶಾಲೆ ಅಂಗನವಾಡಿ ಮತ್ತು ಪ್ರೌಢಶಾಲೆಗಳಲ್ಲಿನ ಮೂಲಭೂತ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತರುವುದರೊಂದಿಗೆ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು ಅಧಿಕಾರಿಗಳು ಇಲಾಖಾವಾರು ತಿಳಿಸಲು ಸಹಕಾರಿಯಾಗುವುದೆಂದ ಅವರು, ಶಾಲಾಭಿವೃದ್ಧಿ ಸಮಿತಿಯವರು ಸದಾ ಚಟುವಟಿಕೆಯಿಂದಿರುವುದು ಮತ್ತು ಶಾಲಾ ಆಸ್ತಿಯವನ್ನು ಉಳಿಸುವ ಉದ್ದೇಶದಿಂದ ಕಂದಾಯ ಇಲಾಖೆ ಹಾಗೂ ಅರಣ್ಯ ಜಮೀನಿನಲ್ಲಿರುವ ಸರ್ಕಾರಿ ಶಾಲಾ ಜಾಗವನ್ನು ಮಂಜೂರಾತಿ ಮಾಡಿಸಿ ಹಕ್ಕುಪತ್ರ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುನಂದ, ಸದಸ್ಯರಾದ ಪ್ರೀತಿ, ಸವಿತಾ, ಚಂದ್ರಕಲಾ, ಉಮೇಶ, ಮಂಜಪ್ಪ, ಶಾಲಾ ವಿದ್ಯಾರ್ಥಿಗಳಾದ ಉಲ್ಲಾಸ್, ಅನಘ್, ವಿ.ಪಿ.ಸ್ಪೂರ್ತಿ, ಪಿಡಿಓ ಪ್ರವೀಣ್

ಅರೋಗ್ಯ ಇಲಾಖೆಯವರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕ ಸಮೂಹ ಗ್ರಾ.ಪಂ.ಸಿಬ್ಬಂದಿವರ್ಗ ಹಾಜರಿದ್ದರು.

ಪಿಡಿಓ ಪ್ರವೀಣ್ ಕುಮಾರ್ ಸ್ವಾಗತಿ, ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here