ಕೋಡೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟದ ನಿರ್ಮಿಸುತ್ತಿರುವ ಸಹಾಯಕ ಗಾರೆ ಕೆಲಸಗಾರ ನಾಪತ್ತೆ !

0
665

ರಿಪ್ಪನ್‌ಪೇಟೆ: ಕೋಡೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಿಸುತ್ತಿರುವ ಸಹಾಯಕ ಗಾರೆ ಕೆಲಸಗಾರನೋರ್ವ ನಾಪತ್ತೆಯಾದ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಹಾಯಕ ಗಾರೆ ಕೆಲಸಗಾರನಾಗಿದ್ದ ಛತ್ತೀಸ್ಗಢ ರಾಜ್ಯದ ಅಬ್ನಾಪುರ ಸೇಜನಿ ಗ್ರಾಮದ ಜಯಕಿಶನ್ ಪೌಲ್ ಎಂಬುವವನು ಕಳೆದ 3 ತಿಂಗಳಿಂದ ಕೆಲಸಕ್ಕೆಂದು ಬಂದು ಕೆಲಸವನ್ನು ಮಾಡಿಕೊಂಡಿದ್ದು, ಜೂ. 12 ರಂದು ಬೆಳಿಗ್ಗೆ 7-00 ಗಂಟೆಯಿಂದ ಕಾಣೆಯಾಗಿದ್ದಾನೆ.

ಈತ ಕಾಣೆಯಾದ ಬಗ್ಗೆ ಪರಿಚಯಸ್ಥರಿಗೆ ಹಾಗೂ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಹುಡುಕಾಡಿದರೂ ಇದೂವರೆಗೂ ಪತ್ತೆಯಾಗಿರುವುದಿಲ್ಲ. ಆತನನ್ನು ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾಣೆಯಾದ ಜಯಕಿಶನ್ ಪೌಲ್ ನನ್ನು ಪತ್ತೆ ಮಾಡಿಕೊಡಬೇಕೆಂದು ಜಯಕಿಶನ್ ಸಹೋದರ ಸಂಬಂಧಿ ಬಲರಾಮ್ ಪೌಲ್ ಎಂಬುವವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here