ತೀರ್ಥಹಳ್ಳಿ: ತಾಲ್ಲೂಕಿನ ಕೋಣಂದೂರು ಸಮೀಪದ ಕೋಟೆಗದ್ದೆ ಎಂಬಲ್ಲಿ ಚಲನಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ನಟಿಸಲಿರುವ ಚಿತ್ರ ‘ಅಂದೊಂದಿತ್ತು ಕಾಲ’ ಎಂಬುದರ ಶೂಟಿಂಗ್ ಕಾರ್ಯ ನಡೆಯುತ್ತಿದೆ.

ಇದು 90 ರ ದಶಕದ ಕತೆಯನ್ನು ಹೇಳುವ ಸಿನಿಮಾವಾಗಿದ್ದು, ಅಂದರೆ 1990ರಿಂದ 2006ರವರೆಗಿನ ಕಾಲಘಟ್ಟದಲ್ಲಿ ನಡೆಯುವ ಮೂರು ಕಾಲ ಘಟ್ಟದ ಪಯಣದ ಹೆಜ್ಜೆ ಗುರುತುಗಳು ಈ ಚಿತ್ರದಲ್ಲಿದೆಯಂತೆ.

90 ದಶಕದಲ್ಲಿನ ವಾತಾವರಣ ಹೇಗಿತ್ತು?, ಈಗಿನ ಕಾಲದ ಜನಜೀವನ ಹೇಗಿದೆ? ಇವೆರಡರ ಮಿಶ್ರಣವೇ ಈ ಚಿತ್ರದ ಮೂಲ ಕಥೆ. ತೀರ್ಥಹಳ್ಳಿ ಸುತ್ತಮುತ್ತ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.
