ಕೋಣಂದೂರು ಬೃಹನ್ಮಠಕ್ಕೆ ಶಾಸಕ ಹರತಾಳು ಹಾಲಪ್ಪ ದಂಪತಿಗಳ ಭೇಟಿ

0
667

ರಿಪ್ಪನ್‌ಪೇಟೆ: 3 ರಂದು ನಡೆಯುವ ಶಾಸಕ ಹರತಾಳು ಹಾಲಪ್ಪ ಪುತ್ರಿಯ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಕನ್ಯಾಡಿಮಠದ ಶ್ರೀಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಹಾಗೂ ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರಿಗೆ, ಅಲಸೆ ಶ್ರೀಚಂಡಿಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಗಳವರನ್ನು ಆಹ್ವಾನಿಸಿದರು.

ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ದಂಪತಿಗಳವರನ್ನು ಉಡಿತುಂಬಿ ಭಾರತೀಯ ಸಂಸ್ಕೃತಿಯಲ್ಲಿ ಪುತ್ರಿಯ ವಿವಾಹ ಸಂದರ್ಭದಲ್ಲಿ ಮೊದಲು ಕುಲದೇವರ ಹಾಗೂ ಪುಣ್ಯಸ್ಥಳಗಳ ಧರ್ಮಾಧಿಕಾರಿಗಳ ಹಾಗೂ ಮಠದ ಶ್ರೀಗಳವರ ಅಶೀರ್ವಾದವನ್ನು ಪಡೆದು ತಮ್ಮ ಶುಭಕಾರ್ಯಗಳನ್ನು ಯಶಸ್ವಿಯಾಗುವಂತೆ ಗುರುಹಿರಿಯರ ಶುಭಾಶೀರ್ವಾದವನ್ನು ಪಡೆಯುವುದು ನಮಗೆ ಹರ್ಷತಂದಿದೆ ಇಂದಿನ ಕಾಲಮಾನದಲ್ಲಿ ಹಿಂದಿನ ತಲೆಮಾರಿನವರು ಕಾಹಿಕೊಟ್ಟಂತ ಸಂಸ್ಕೃತಿ ಸಂಸ್ಕಾರಗಳಿಂದ ದೂರವಾಗುವ ಇಂದಿನ ದಿನಮಾನ್ಯಗಳಲ್ಲಿ ಶಾಸಕ ಹಾಲಪ್ಪ ಮತ್ತು ದಂಪತಿ ತಮ್ಮ ಹಿಂದಿನ ಸಂಪ್ರದಾಯವನ್ನು ಅನುಕರಣೆ ಮಾಡಿರುವುದು ಇನ್ನೊಬ್ಬರಿಗೆ ಮಾದರಿಯಾಗಲಿ ಎಂದು ಶ್ರೀಗಳು ಹಾರೈಸಿದರು.

ಸೀರೆ, ಬಳೆ ಮುತ್ತೈದೆಯವರಿಗೆ ಉಡಿಅಕ್ಕಿ, ತೆಂಗಿನಕಾಯಿ, ಅರಿಶಿಣ, ಕುಂಕುಮವನ್ನು ಇಟ್ಟು ಹಿಂದು ಸಂಪ್ರದಾಯದಂತೆ ತಮ್ಮ ಪೂರ್ವಿಕರು ಅಚರಿಸಿಕೊಂಡು ಬಂದಂತಹ ಪದ್ದತಿಯನ್ನು ಕೋಣಂದೂರು ಶ್ರೀಗಳು ಶಾಸಕ ದಂಪತಿಯರಿಗೆ ಉಡಿತುಂಬಿ ಇಬ್ಬರನ್ನು ಶಾಲು ಹೊಂದಿಸಿ ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ಪ್ರಕಾಶ್, ಕೋಣಂದೂರು ವಾಗೇಶಯ್ಯ, ಸಚಿನ್‌ಗೌಡ ಗರ್ತಿಕೆರೆ, ಮೆಣಸೆ ಅನಂದ, ಕೀರ್ತಿಗೌಡ ಕುಕ್ಕಳಲೆ, ಗಂಗಾಧರಗೌಡ ಮಳವಳ್ಳಿ, ರಮೇಶ್‌ಗೌಡ ಕೊಳವಳ್ಳಿ,ವರುಣಗೌಡ ಕೋಟೆಗದ್ದೆ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here