ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ ಇಲ್ಲ, ಪ್ರತಿಯೊಬ್ಬರು ಲಸಿಕೆ ಪಡೆಯಲು ಮನವಿ

0
531

ರಿಪ್ಪನ್‌ಪೇಟೆ: ಯಾವುದೇ ಭಯವಿಲ್ಲದೆ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರೀಕರು ಕೋವಿಡ್ ಲಸಿಕೆ ಪಡೆದುಕೊಳುವುದು ಅಗತ್ಯವಾಗಿದೆ ಎಂದು ಹಿರಿಯ ಆರೋಗ್ಯ ಕಾರ್ಯಕರ್ತೆ ರಂಜಿತ ಮನವಿ ಮಾಡಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಇಂದು ನಡೆದ ಕೋವಿಡ್-ಲಸಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಲಸಿಕೆಯಿಂದಾಗಿ ಯಾವುದೆ ಅಡ್ಡ ಪರಿಣಾಮ ಎದುರಾಗುವುದಿಲ್ಲ. ಹೃದಯ ಬೇನೆ ಮತ್ತು ಕ್ಯಾನ್ಸರ್, ಕಿಡ್ನಿ ವೈಪಲ್ಯದವರು ಮಾತ್ರ ಈ ಲಸಿಕೆಯನ್ನು ಪಡೆಯುವಂತಿಲ್ಲ. ಉಳಿದಂತೆ ಪ್ರತಿಯೊಬ್ಬ ನಾಗರೀಕರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಲಸಿಕೆಯನ್ನು ಹಾಕಿಸಿಕೊಂಡವರಿಗೆ ಆರಂಭದಲ್ಲಿ ಜ್ವರ ಬರುವುದು ಹಾಗೂ ನೋವು ಕಾಣಿಸಿಕೊಳ್ಳತ್ತದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಟಿಟಿ ಇಂಜೆಕ್ಷನ್ ಪಡೆದಾಗ ಕಾಣಿಸಿಕೊಳ್ಳುವ ನೋವು ಒಂದು ಎರಡು ದಿನದಲ್ಲಿ ಕಡಿಮೆಯಾಗುವುದು ಇನ್ನೂ ಲಸಿಕೆಯ ಪಡೆದ ಎರಡನೇ ದಿನದಿಂದ ತನ್ನ ಕೆಲಸವನ್ನು ಮಾಡಲು ಪ್ರಾರಂಭಿಸುತ್ತದೆ ಕೊರೊನಾ ಎರಡನೇ ಅಲೆ ಅರಂಭವಾಗಿರುವ ಹಿನ್ನಲೆಯಲ್ಲಿ ಎಲ್ಲರಿಗೂ ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಇದೆ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಕೊರೊನಾ ಬಂದರೂ ತೊಂದರೆಯಾಗಲ್ಲ ತಕ್ಷಣ ಗುಣಮುಖರಾಗುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಸಾಮಾಜಿಕ ಅಂತರ ಸೇರಿದಂತೆ ಸಭೆ ಸಮಾರಂಭಗಳನ್ನು ನಡೆಸದಿರುವಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುವ ಮೂಲಕ ನಾಗರೀಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು ನಾಳೆಯಿಂದ ಮಾಸ್ಕ್ ಹಾಕದವರ ಮೇಲೆ ದಂಡ ಹಾಕುವುದಾಗಿ ವಿವರಿಸಿದರು.

ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಜೆ.ಚಂದ್ರಶೇಖರ್ ಮಾತನಾಡಿ, ಗ್ರಾಮ ಮಟ್ಟದಲ್ಲಿ ಅರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಗ್ರಾಮದಲ್ಲಿನ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಪಡೆದು ಅರೋಗ್ಯ ಕಾಪಾಡಿಕೊಳ್ಳಬೇಕು ಸ್ವಯಂಪ್ರೇರಿತರಾಗಿ ಮುಂದೆ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಉತ್ಸಾಹ ತೋರಬೇಕು ಆಗ ಈ ಮಾರಕ ರೋಗದಿಂದ ಮುಕ್ತರಾಗಿ ಗ್ರಾಮವನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸೋಣ ಎಂದು ಮನವಿ ಮಾಡಿದರು.

ಈ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯರಾದ ಗಣಪತಿ, ಎನ್.ಚಂದ್ರೇಶ್, ಪಿ.ರಮೇಶ್, ಆಶೀಫ್, ವೇದಾವತಿ, ಧನಲಕ್ಷ್ಮೀ, ದೀಪಾ, ನಿರೂಪಮ, ಸಾರಾಬಿ, ಡಿ. ಈ.ಮಧುಸೂದನ್, ಜಿ.ಡಿ.ಮಲ್ಲಿಕಾರ್ಜುನ, ಸುಧೀಂದ್ರ ಪೂಜಾರಿ, ಪಂಚಾಯ್ತಿ ಸಿಬ್ಬಂದಿ ವರ್ಗ ಹಾಜರಿದ್ದರು.

ಇನ್ನೂ ಕೋಡೂರು ಗ್ರಾಪಂ ನಲ್ಲಿ ನಡೆದ ಸಭೆಯಲ್ಲಿ ಆರೋಗ್ಯಾಧಿಕಾರಿ ರಾಕೇಶ್, ಸ್ವಸಹಾಯ ಸಂಘಗಳ ಅಧ್ಯಕ್ಷೆ ವಿಜಯಲಕ್ಷ್ಮೀ, ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ಉಮೇಶ್, ಸುಧಾಕರ್, ಮಂಜಪ್ಪ, ಕಾರ್ಯದರ್ಶಿ ಭೀಮಣ್ಣ, ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಕೊರೊನಾ ಲಸಿಕೆ ಬಗ್ಗೆ ಮಾಹಿತಿ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here