ಕೋವಿಡ್-19 ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂದನ್ ಸಾರ್ವಜನಿಕರಿಗೆ ಕರೆ

0
809

ಹೊಸನಗರ: ದೇಶದಲ್ಲಿ ಕೊರೊನಾ ಆರ್ಭಟವನ್ನು ಪ್ರಥಮ ಅಲೆ-ದ್ವಿತೀಯ ಆಲೆಯನ್ನು ಈಗಾಗಲೇ ನೋಡಿದ್ದೇವೆ ಕೊರೊನಾ ಒಂದು ಹಂತದಲ್ಲಿ ಕಡಿಮೆಯಾಗುತ್ತಿದೆ ತಜ್ಞರು ಮೂರನೇ ಅಲೆ ಇನ್ನೂ ಭೀಕರವಾಗಿ ಬರಲಿದೆ ಎಂದು ವರದಿಯನ್ನು ಸರ್ಕಾರಕ್ಕೆ ನೀಡಿರುವುದರಿಂದ ಸಾರ್ವಜನಿಕರು ಹಬ್ಬ ಹರಿದಿನಗಳನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿ ಜೀವವಿದ್ದರೆ ಜೀವನ ಜೀವವಿದ್ದರೆ ಮುಂದೆ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಬಹುದು ನಿಮ್ಮ ಜೊತೆಗೆ ನಿಮ್ಮ ಕುಟುಂಬವನ್ನು ವಿಕೋಪಕ್ಕೆ ತಳ್ಳಬೇಡಿ ಆದ್ದರಿಂದ ಈ ಬಾರೀಯ ಎಲ್ಲ ಹಬ್ಬಗಳನ್ನು ಸರಳ ರೀತಿಯಲ್ಲಿ ಆಚರಿಸಿ ಈ ಕೊರೊನಾ ಮಹಾಮಾರಿಯನ್ನು ದೇಶದಿಂದ ಓಡಿಸೋಣ ಎಂದರು.

ಹೊಸನಗರದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಗೆ ಆಗಮಿಸಿ ಮಾತನಾಡಿದರು.

ಸರ್ಕಾರ ಗಣೇಶ ಹಬ್ಬದ ಪ್ರಯುಕ್ತ ಸಾಕಷ್ಟು ನಿರ್ಬಂಧಗಳನ್ನು ಸಾರ್ವಜನಿಕರ ಮೇಲೆ ಹಾಕಲಾಗಿದ್ದು ಅವುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಗಣೇಶಮೂರ್ತಿಯ ಗಾತ್ರ 4ಅಡಿ ಮೀರಬಾರದು, ಗಣೇಶಮೂರ್ತಿಯನ್ನು ಸ್ಥಾಪಿಸುವವರು ಸರ್ಕಾರಿ ಕಛೇರಿಗಳಲ್ಲಿ ಅಥವಾ ಶಾಲೆ, ಕಾಲೇಜ್ ಆವರಣದಲ್ಲಿ ಸ್ಥಾಪಿಸಬಾರದು. ಪ್ರತಿಷ್ಠಾಪಿಸಿದ ಗಣೇಶನನ್ನು 5 ದಿನದ ಒಳಗೆ ವಿಸರ್ಜನೆ ಮಾಡಬೇಕು, ಗಣೇಶಮೂರ್ತಿಯನ್ನು ಸ್ಥಾಪಿಸಿದ ಸ್ಥಳದಲ್ಲಿ 20ಜನರಿಗಿಂತ ಹೆಚ್ಚು ಜನ ಇರಬಾರದು ಅಲ್ಲದೇ ಪ್ರತಿ ದಿನ ಸ್ಯಾನಿಟೈಸರ್ ಸಿಂಪಡಿಸುತ್ತಿರಬೇಕು ಗಣೇಶಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸುವಾಗ ಆಯೋಜಕರು ಕೋವಿಡ್ ಲಸಿಕೆ ಹಾಕಿಸಿಕೊಂಡ ವರದಿ ಪತ್ರ ಜೊತೆಯಲ್ಲಿರಬೇಕು ಗಣೇಶಮೂರ್ತಿಯನ್ನು ಸ್ಥಾಪಿಸುವಾಗ ಯಾವುದೇ ವಾಹನ ಓಡಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಈ ಬಾರಿಯ ಗಣೇಶೋತ್ಸವದಲ್ಲಿ ಯಾವುದೇ ಸಾಂಸ್ಕೃತೀಕ ಸಂಗೀತ ನೃತ್ಯ ಹಾಗೂ ಡಿ.ಜೆಯ ಮೂಲಕ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶಗಳಿರುವುದಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದು ಪಟ್ಟಣ ಪಂಚಾಯಿತಿಯ ಸದಸ್ಯರು ಸರ್ಕಾರದ ಸುತ್ತೋಲೆಯನ್ನು ಪ್ರಚಾರ ಪಡಿಸಬೇಕೆಂದರು.

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಸಿಕಸ-ಒಣ ಕಸವನ್ನು ಪ್ರತ್ಯೇಕಿಸುವ ಕಸದ ಬುಟ್ಟಿಗಳನ್ನು ಖರೀದಿಸುವ ಬಗ್ಗೆ, ರೀತ್ಯಾ ಸ್ವಚ್ಛ ಭಾರತ್ ಯೋಜನೆಯಡಿ ಐ.ಇ.ಸಿ ಚಟುವಟಿಕೆಗಳಿಗೆ ಬಿಡುಗಡೆಯಾದ 2.50 ಲಕ್ಷ ರೂಪಾಯಿಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ಉತ್ತಮ ಗುಣ ಮಟ್ಟದ ಚೀಲಗಳನ್ನು ನೀಡುವ ಬಗ್ಗೆ, ಶಿವಪ್ಪನಾಯಕ ರಸ್ತೆಯ ಸಂತೆ ಮೈದಾನದಲ್ಲಿ ಕೋವಿಡ್-19 ನಿಯಮಾವಳಿಯಂತೆ ಸಂತೆಯನ್ನು ನಿಲ್ಲಿಸಲಾಗಿದ್ದು ಪ್ರಾರಂಭಿಸುವ ಬಗ್ಗೆ, ಪಟ್ಟಣ ಪಂಚಾಯಿತಿ ಕಛೇರಿಯ ಎದುರಿನ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಯ ಪಾರ್ಕಿಂಗ್ ಕುರಿತು ವಿಚಾರ ಹೊಸನಗರ ಪಟ್ಟಣದಲ್ಲಿ ಧಾರ್ಮಿಕ ಕಟ್ಟಡದ ತೆರವಿನ ಬಗ್ಗೆ ಚರ್ಚೆ ನಡೆಸಲಾಯಿತ್ತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಉಪಾಧ್ಯಕ್ಷರಾದ ಕೃಷ್ಣವೇಣಿ, ಗುರುರಾಜ್ ಆರ್, ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಗಾಯಿತ್ರಿ ನಾಗರಾಜ್, ಸಿಂಥೀಯ,ಶಾಹೀನ ನಾಸೀರ್ ಹಾಗೂ ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರು ಪಟ್ಟಣ ಪಂಚಾಯಿತಿಯ ಎಲ್ಲ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here