ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಹಿರಿಯ ಪತ್ರಕರ್ತ ಯು.ಎಸ್ ಸದಾನಂದ ರವರು ಕೋವಿಡ್ ನಿರೋಧಕ ಚುಚ್ಚುಮದ್ದು ಪಡೆದರು.
ಆಸ್ಪತ್ರೆಯಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರು ಪ್ರೇರಿತರಾಗಿ ಬಂದು ಕೋವಿಡ್ ನಿರೋಧಕ ಚುಚ್ಚುಮದ್ದನ್ನು ಪಡೆಯುತ್ತಿದ್ದಾರೆ. ಚುಚ್ಚುಮದ್ದನ್ನು ಪಡೆಯಲು ಬರುವ ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತರಬೇಕೆಂದು ತಾಲೂಕು ಆರೋಗ್ಯಧಿಕಾರಿ ಡಾ|| ಸುರೇಶ್ ತಿಳಿಸಿದ್ದು, ಒಂದು ಬಾರಿಗೆ 10 ಜನರಿಗೆ ಚುಚ್ಚುಮದ್ದು ನೀಡಲಾಗುತ್ತದೆ. ಒಂದು ವೇಲ್ ನಲ್ಲಿ 10 ಜನರಿಗೆ ನೀಡುವಷ್ಟು ರೋಗ ನಿರೋಧಕ ಔಷಧಿ ಇರುವುದರಿಂದ ಸಾರ್ವಜನಿಕರು ಸಿಬ್ಬಂದಿಗಳೊಂದಿಗೆ ಸಹಕರಿಸುವ ಮೂಲಕ ಆರೋಗ್ಯದ ಸೌಲಭ್ಯ ಪಡೆಯಬೇಕಾಗಿ ಅವರು ಕೋರಿದ್ದಾರೆ.
ಈಗ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಲಸಿಕೆ ನೀಡುವ ಕಾರ್ಯ ಸರ್ಕಾರ ಒದಗಿಸಲಿದೆ ಎಂದು ಅವರು ತಿಳಿಸಿದರು.
Related