23.2 C
Shimoga
Sunday, November 27, 2022

ಕೌಟುಂಬಿಕ ಕಲಹ ; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ !

ರಿಪ್ಪನ್‌ಪೇಟೆ : ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಹರತಾಳು ಗ್ರಾಪಂ ವ್ಯಾಪ್ತಿಯ ನೇರಲೆಮನೆ ಗ್ರಾಮದ ಬೀರಪ್ಪ (50) ಮೃತಪಟ್ಟ ವ್ಯಕ್ತಿಯಾಗಿದ್ದು ಇವರ ಪತ್ನಿ 23 ವರ್ಷದ ಪುತ್ರ ಹಾಗೂ 21 ವರ್ಷದ ಪುತ್ರಿಯೊಂದಿಗೆ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದು, ಈತ ಕಳೆದ 5 ವರ್ಷದಿಂದ ಏಕಾಂಗಿಯಾಗಿ ವಾಸವಿದ್ದ.

ಕಳೆದ ಒಂದು ವರ್ಷದ ಹಿಂದೆ ತನ್ನ ಗಂಡನ ವಿರುದ್ಧ ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇದನ ಹಾಗೂ ಜೀವನಾಂಶಕ್ಕಾಗಿ ದಾವೆ ಹೂಡಿದ್ದರು. ಸಂಸಾರದ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೀರಪ್ಪ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದ.

ಕೌಟುಂಬಿಕ ವಿಚಾರದಲ್ಲಿ ತೀವ್ರವಾಗಿ ಮನನೊಂದಿದ್ದ ಬೀರಪ್ಪ ಮಂಗಳವಾರ ಸಂಜೆ 06 ಗಂಟೆ ಸುಮಾರಿಗೆ ತನ್ನ ಮನೆಯ ಮುಂದಿನ ಜಗಲಿಯಲ್ಲಿ ಪಕಾಸಿಗೆ ತನ್ನ ಪಂಚೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಘಟನೆ ಸಂಬಂಧ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!