23.2 C
Shimoga
Sunday, November 27, 2022

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ ; ಹಾಲಗದ್ದೆ ಉಮೇಶ್


ಹೊಸನಗರ: ಯಾವುದೇ ಕ್ರೀಡೆಯಲ್ಲಿ ಸ್ಪರ್ಧಿಸಿದಾಗ ಸೋಲು-ಗೆಲುವು ಮುಖ್ಯವಾಗಿರುವುದಿಲ್ಲ ಸ್ಪರ್ಧಿಸುವುದು ಮುಖ್ಯವಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಹೇಳಿದರು.


ಹೊಸನಗರದ ರಾಮಕ್ಷತ್ರೀಯ ರಸ್ತೆಯಲ್ಲಿರುವ ಕಟ್ಟೆ ಸುರೇಶ್‌ರವರ ಮನೆಯ ಮುಂಭಾಗದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆರ್.ಕೆ ರೋಡ್ ಬಾಯ್ಸ್ ರವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದು ಈ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.


ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮ ಹಾಗೂ ದೇಹ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಂದು ಸೋತವರು ನಾಳೆ ಗೆಲ್ಲಬಹುದು ಆದರೆ ಆಟಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಯಾವುದೇ ಕ್ರೀಡೆಯಾಗಿರಲಿ ವಯಸ್ಸು ಎಷ್ಟೇ ಆಗಿರಲಿ ಭಾಗವಹಿಸಿ ಉತ್ತಮ ಆರೋಗ್ಯವಂತರಾಗಿರಿ ಎಂದರು.


ಈ ಸಂದರ್ಭದಲ್ಲಿ ಪಂದ್ಯಾವಳಿಯ ಆಯೋಜಕರಾದ ಕಟ್ಟೆ ಸುರೇಶ್, ಪಟ್ಟಣ ಪಂಚಾಯಿತಿ ಸದಸ್ಯ ಅಶ್ವಿನಿಕುಮಾರ್, ಅರುಣ್ ಕುಮಾರ್, ಅನುಪ ಇನ್ನೂ ಮುಂತಾದವರು ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!