ರಿಪ್ಪನ್ಪೇಟೆ: ಕ್ರೀಡೆ ಸೋಲು ಗೆಲುವುವನ್ನು ಸಮನಾಗಿ ಸ್ವೀಕರಿಸುವಂತಾಗಬೇಕು. ದ್ವೇಷ ಭಾವನೆಯನ್ನು ಬೆಳಸದೆ ಎಲ್ಲರೂ ಸ್ನೇಹ ಸೌಹಾರ್ದಯುತವಾಗಿ ಸಂಘಟಿಸುವ ಶಕ್ತಿ ಕ್ರೀಡೆಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಯ ಬಗ್ಗೆ ನಿರಾಶಕ್ತರಾಗಿದ್ದು ಸರ್ಕಾರ ಸಹ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುವಂತಾಗಬೇಕು ಎಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹೇಳಿದರು.
ಇಲ್ಲಿನ ಶ್ರೀ ಸಿದ್ದಿವಿನಾಯಕ ವಾಲಿಬಾಲ್ ಕ್ಲಬ್ನ 9ನೇ ವರ್ಷದ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಉಳಿಸಿ ಬೇಳಸಬೇಕು.ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದರು. ಈಗಾಗಲೇ ಕೇಂದ್ರ ಮತ್ತು ರಾಜ್ಯಸರ್ಕಾರ ಕ್ರೀಡೆಗೆ ಹೆಚ್ಚು ಅನುದಾನವನ್ನು ನೀಡುವುದರೊಂದಿಗೆ ಕ್ರೀಡೆಗೆ ಉತ್ತೇಜನ ಕಲ್ಪಿಸುತ್ತಿದ್ದು ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಕ್ರೀಡಾಂಗಣದ ಅವಶ್ಯಕತೆಯಿದೆ ಎಂಬ ಬೇಡಿಕೆಯಿದೆ ಮುಂದಿನ ದಿನಗಳಲ್ಲಿ ಕ್ರೀಡಾಂಗಣಕ್ಕೆ ಸರ್ಕಾರದ ಅನುದಾನ ಕೊಡಿಸುವ ಭರವಸೆ ನೀಡಿ ಯುವಜನಾಂಗಕ್ಕೆ ವಾಲಿಬಾಲ್ ಕ್ರೀಡಾ ತರಬೇತಿ ನೀಡುವುದರೊಂದಿಗೆ ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳಸುವ ಕಾರ್ಯವನ್ನು ಮಾಡುವುದರೊಂದಿಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಉತ್ತಮ ಆರೋಗ್ಯದಿಂದರಲು ಸಹಕಾರಿಯಾಗುವಂತೆ ಕರೆ ನೀಡಿದರು.
ಕ್ರೀಡಾಕೂಟದ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ದಿವಿನಾಯಕ ವಾಲಿಬಾಲ್ ಕ್ಲಬ್ ಅಧ್ಯಕ್ಷ ಅರುಣ್ಕುಮಾರ್ ಅರಸಾಳು ವಹಿಸಿದ್ದರು. ಹಿರಿಯ ವಾಲಿಬಾಲ್ ಕ್ರೀಡಾಪಟು ಡ್ರೈವರ್ ಪ್ರಕಾಶ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಮುಖ್ಯಅತಿಥಿಗಳಾಗಿ ತಾ.ಪಂ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ.ಸದಸ್ಯೆ ಕುಮಾರಿ ಶ್ವೇತಾ ಆರ್ ಬಂಡಿ, ಸುರೇಶ್ ಸ್ವಾಮಿರಾವ್, ಜಿ.ಸ್ಪೂ. ಅಧ್ಯಕ್ಷ ಕಾರ್ಯದರ್ಶಿ ಕೆ.ಎಸ್.ಶಶಿಕುಮಾರ್, ಸಿದ್ದಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸತೀಶ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಹುಂಚಾ ಗ್ರಾಮ ಪಂಚಾಯ್ತಿ ಸದಸ್ಯೆ ಯಶಸ್ವತಿ ವೃಷಭರಾಜ್ಜೈನ್, ಉದ್ಯಮಿ ನಾಗರಾಜ್ಶೆಟ್ಟಿ, ಸಂತೋಷ, ಸಿರಿಬೈಲು ಧರ್ಮೇಶ್, ಶಂಕರ್ ಶಿವಮೊಗ್ಗ, ಸುಕೇಶ್ ಬೆಂಗಳೂರು ಇದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಗಣೇಶ್ಗೌಡ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಅಶ್ವಲ್ ರೈತ ತಂಡ ಮತ್ತು ತೃತೀಯ ಸ್ಥಾನವನ್ನು ಕುಂದಾಪುರ ತಂಡ ಚತುರ್ಥ ಬಹುಮಾನವನ್ನು ಹುಬ್ಬಳ್ಳಿ ರೈಲ್ವೆ ತಂಡ ಗಳಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಪಟು ಬಿಜು ಮಾರ್ಕೋಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.