ಕ್ಲಿಷ್ಟ ಪರಿಸ್ಥಿತಿಯಲ್ಲಿ ಹೆರಿಗೆಯನ್ನು ಅತ್ಯಂತ ಭರವಸೆಯಿಂದ ನೆರವೇರಿಸಿದ ಹೊಸನಗರ ಆಸ್ಪತ್ರೆ ವೈದ್ಯ ಸಿಬ್ಬಂದಿಗಳು

0
2055

ಹೊಸನಗರ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ವಾರ ಪ್ರಪ್ರಥಮವಾಗಿ ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ್ದು ಇದೇ ವೈದ್ಯ ಸಿಬ್ಬಂದಿಗಳು ಇಂದು ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಎರಡೆರಡೂ ಹೆರಿಗೆ ಮಾಡಿಸಿದ್ದಾರೆ.

ಹೊಸನಗರದ ಮೊಹಮ್ಮದೀಯ ಮಸೀದಿಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ದೂರದ ಬಿಹಾರದ ಮಧುಬನಿಯ ನಿವಾಸಿ ಶೇಖ್ ಷಾದಾಬ್ ಮೊಹಮ್ಮದಿ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಗರ್ಭಿಣಿಗೆ ಈ ಬಾರಿಯ ಹೆರಿಗೆ ಹೆಚ್ಚು ಕಷ್ಷಕರವೆಂದೇ ಹೇಳಲಾಗುತ್ತಿತ್ತು. ಇದು ಆ ಮಹಿಳೆಯ ಆರನೇ ಹೆರಿಗೆ ಆಗಿರುತ್ತದೆ. ಇದು ಸಹ ಸಿಸೇರಿಯನ್ ಮೂಲಕ ವೈದ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದಾರೆ.

ಹಾಗೆಯೇ ಮತ್ತೊಂದು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಹೊಸನಗರ ಸಮೀಪದ ವಾರಂಬಳ್ಳಿ ನಿವಾಸಿ ಸುಶ್ಮಿತಾ, ಲಿಂಗರಾಜು ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ. ಇದು ಆ ಮಹಿಳೆಯ ಎರಡನೇ ಹೆರಿಗೆಯಾಗಿದ್ದು ಮೊದಲನೇ ಮಗು ಗಂಡಾಗಿದ್ದು ಇಂದು ಸಿಸೇರಿಯನ್ ಮೂಲಕ ಹೆರಿಗೆಯಾದ ಮಗು ಹೆಣ್ಣಾಗಿದೆ.

ಎರಡು ಹೆರಿಗೆಯಲ್ಲಿಯೂ ಹೆಣ್ಣು ಮಕ್ಕಳು ಎರಡು ಮುಕ್ಕಾಲು ಕೆ.ಜಿ ತೂಕವಿದ್ದು ಆರೋಗ್ಯವಂತವಾಗಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿ ಡಾ.ಸುರೇಶ್ ರವರ ಮಾರ್ಗದರ್ಶನದಲ್ಲಿ ವೈದ್ಯರಾದ ಡಾ.ಲಿಂಗರಾಜ್, ಡಾ.ಶಾಂತರಾಜ್, ಪ್ರಸೂತಿ ತಜ್ಞೆ ಡಾ.ಅಮೂಲ್ಯ, ಡಾ. ವಿನಯ್, ಹಿರಿಯ ಶುಷ್ರೂಷಕಿ ಶೈಲಜ, ರಂಗನಾಥ್, ಶಾಲಿನಿ ಹಾಗೂ ಆಶಾ ಕಾರ್ಯಕರ್ತೆಯರಾದ ಸವಿತಾ,ಮನಾಗರತ್ನರನ್ನು ಒಳಗೊಂಡ ತಂಡ ಇಂದು ಯಶಸ್ವಿ ಶಸ್ತ್ರಚಿಕಿತ್ಸಾ ಹೆರಿಗೆ ಮಾಡಿಸಲಾಯಿತು.

ಹೊಸನಗರದ ಇತಿಹಾಸದಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಕನಸಿನ ಮಾತಾಗಿದ್ದ ಕಾಲದಲ್ಲಿ ಕಳೆದ 1 ವಾರಗಳಿಂದೀಚೆಗೆ 3 ಹೆರಿಗೆ ಮಾಡಿಸಲಾಗಿದ್ದು, ಇಲ್ಲಿನ ಆಸ್ಪತ್ರೆ ವೈದ್ಯ ಸಿಬ್ಬಂದಿಗಳನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here