ಕ್ಷಯ ಮುಕ್ತ ರಾಜ್ಯವಾಗಲು ಜನಜಾಗೃತಿಗಾಗಿ ಆಶಾ ಕಾರ್ಯಕರ್ತರಿಂದ ಹೊಸನಗರ ಪಟ್ಟಣದಲ್ಲಿ ನಡೆದ ಜಾಥಾ

0
292

ಹೊಸನಗರ : ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಇಂದು ಹೊಸನಗರದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಕಚೇರಿಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು ಇಂದು ಪಟ್ಟಣದಲ್ಲಿ ಕ್ಷಯರೋಗ ನಿರ್ಮೂಲನೆ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿ ಜನ ಜಾಗೃತಿ ಮೂಡಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ., ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ|| ಸುರೇಶ್, ಸರ್ಜನ್ ಡಾ|| ಹೇಮಂತ್, ಗ್ರೇಡ್ 2 ತಹಸಿಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಶಿರಸ್ತೆದಾರ್ ಶ್ರೀಕಾಂತ ಹೆಗಡೆ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೆ.ಆರ್ ಪ್ರಭಾಕರ್, ಹಿರಿಯ ಆರೋಗ್ಯ ಸಹಾಯಕ ರಮೇಶ್ ಆಚಾರಿ, ಹಿರಿಯ ಕ್ಷಯರೋಗ ಚಿಕಿತ್ಸೆ ಮೇಲ್ವಿಚಾರಕ ಚಂದ್ರಪ್ಪ, ಪ್ರಭುರಾಜ್, ನಿಖಿತ್ ರಾಜ್, ಆಶಾ ಮೆಂಟರ ಗೀತಾ, ಕರಿಬಸಮ್ಮ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ, ಕ್ಷಯ ರೋಗ ಸಂಪೂರ್ಣ ನಿರ್ಮೂಲನಕ್ಕೆ ಕಾಲ ಘಟಿಸುತ್ತಿದೆ ಎಂಬ ಘೋಷಣೆಗಳೊಂದಿಗೆ ಕರ್ತವ್ಯ ಎಸಗುತ್ತಿದ್ದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಸೌಲಭ್ಯವಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here