ಕ್ಷುಲ್ಲಕ ಕಾರಣಕ್ಕೆ ಅಪ್ಪ, ಮಗನ ನಡುವೆ ಗಲಾಟೆ: ತೆಂಗಿನ ರಟ್ಟೆಯಿಂದ ತಲೆಗೆ ಬಡಿದು ತಂದೆಯ ಕೊಲೆ!

0
1897

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಅಪ್ಪ, ಮಗನ ನಡುವೆ ಗಲಾಟೆ ನಡೆದು ತೆಂಗಿನ ರಟ್ಟೆಯಿಂದ ಮಗನೇ ತಂದೆಯ ತಲೆಗೆ ಬಡಿದು ಕೊಲೆ ಮಾಡಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡೇನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ?

ಭಾನುವಾರ ರಾತ್ರಿ ಮಂಡೇನಕೊಪ್ಪದಲ್ಲಿ ಮಗ ಮಧು (28) ಎಂಬಾತ ತಂದೆ ಕುಮಾರನಾಯ್ಕ (55)ನು ಮನೆಯಲ್ಲಿನ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಕುಡಿದು ಬರುತ್ತಾನೆಂದು ತೆಂಗಿನ ರಟ್ಟೆಯಿಂದ ಹೊಡೆದಿದ್ದಾನೆ ಈ ವೇಳೆ ಕುಮಾರನಾಯ್ಕನಿಗೆ ಕಿವಿಯಲ್ಲಿ ರಕ್ತಬಂದಿದೆ. ಆದರೆ ಹೊಡೆತ ತಿಂದ ಕುಮಾರನಾಯ್ಕ ಮನೆಯಿಂದ ಹೊರಗೆ ಹೊಗಿದ್ದು ರಾತ್ರಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಂದು ಮಲಗಿದ್ದು ತೀವ್ರ ರಕ್ತ ಸ್ರಾವದಿಂದ ಕುಮಾರನಾಯ್ಕನ ಪ್ರಾಣಪಕ್ಷಿ ಮಲಗಿದ್ದ ಸ್ಥಳದಲ್ಲೇ ಹಾರಿಹೋಗಿದೆ.

ಆದರೆ ಈ ಮಧ್ಯೆ ಮಧು ತಮಟೆ ಬಾರಿಸುವವನ್ನ ಕರೆದುಕೊಂಡು ಬಂದು ಶವಸಂಸ್ಕಾರಕ್ಕೆ ಮುಂದಾಗಿದ್ದನು. ಆದರೆ ಕುಮಾರನಾಯ್ಕನ ಪತ್ನಿ ತುಂಗಾ‌ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಧುವನ್ನ ಬಂಧಿಸಿ ಕಲಂ 302 ಮತ್ತು 201 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕುಮಾರನಾಯ್ಕನಿಗೆ ಗಿರೀಶ್, ಮಧು ಹಾಗೂ ಶಿಲ್ಪಾ ಬಾಯಿ ಎಂಬ ಮೂವರು ಮಕ್ಕಳಿದ್ದಾರೆ. ಕುಮಾರನಾಯ್ಕನ ಜೊತೆ ಮಧು ವಾಸವಾಗಿದ್ದು, ಇಬ್ಬರಿಗೂ ಯಾವಾಗಲೂ ಕುಡಿದು ಜಗಳವಾಗುತ್ತಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here