Home Crime News ಕ್ಷುಲ್ಲಕ ಕಾರಣಕ್ಕೆ ಗಲಾಟೆ ; ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ !
ಶಿವಮೊಗ್ಗ: ಯುವಕನೋರ್ವನನ್ನು ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಳಿ ಬಿ.ಹೆಚ್ ರಸ್ತೆಯಲ್ಲಿ ಸುಮಾರು ರಾತ್ರಿ 11 ಗಂಟೆ ಈ ಘಟನೆ ನಡೆದಿದ್ದು, ನಗರದ ಪದ್ಮ ಟಾಕೀಸ್ ನಿವಾಸಿ ಕುಶನ್ ಚಂದು @ RX ಚಂದು (32) ಕೊಲೆಯಾದ ಯುವಕ.
ದುಷ್ಕರ್ಮಿಗಳು ಯುವಕನನ್ನು ಜಗಳ ತೆಗೆದು ಬಳಿಕ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ನೇಹಿತ ಸತೀಶ್ ಜೊತೆ ಬಸ್ ನಿಲ್ದಾಣದ ಬಳಿ ತಡರಾತ್ರಿ ಊಟಕ್ಕೆಂದು ಬಂದಿದ್ದ ಚಂದುವಿನ ಮೇಲೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಇಲ್ಲಿನ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಪರಶುರಾಮ್ (24) ಎಂಬಾತ ಗಲಾಟೆ ಮಾಡಿದ್ದ ಗಲಾಟೆ ವಿಕೋಪಕ್ಕೆ ತಿರುಗಿ ಚಂದು ಮೇಲೆ ಆರೋಪಿ ಪರಶುರಾಮ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕಲ್ಲಿನಿಂದ ಹೊಡೆಯುವ ವೇಳೆ ಕುಶನ್ ಚಂದು ಸ್ನೇಹಿತ ಸತೀಶ್ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಆರೋಪಿ ಪರಶುರಾಮ್ ನನ್ನ ಪೊಲೀಸರು ಬಂಧಿಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related