ಕ್ಷೇತ್ರದ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ; ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ

0
734

– ಜನ ಆತ್ಮಹತ್ಯೆ ಮಾಡಿಕೊಳ್ಳಲೆಂದೆ ಗಣಪತಿ ಕೆರೆ ಅಭಿವೃದ್ಧಿಪಡಿಸಲಾಗಿದೆ !!

ರಿಪ್ಪನ್‌ಪೇಟೆ: ಕಳೆದ ಮೂರು ವರ್ಷ ಹಿಂದೆ ಭಾರಿ ಮಳೆ ಸುರಿದು ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದರೂ ಕೂಡಾ ಸರ್ಕಾರದಿಂದ ಪರಿಹಾರ ಹಣ ಈವರೆಗೂ ಬಂದಿಲ್ಲ. ಇನ್ನೂ ಆಶ್ರಯ ಫಲಾನುಭವಿಗಳಿಗೆ ಹಣ ನೀಡದೆ ಇದ್ದು ಸರ್ಕಾರ ಮತ್ತು ಕ್ಷೇತ್ರದ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೃಹಪ್ರವೇಶ ಹುಟ್ಟುಹಬ್ಬ ಮದುವೆ ಸಮಾರಂಭಗಳಲ್ಲಿ ಕಾಲಹರಣ ಮಾಡುವ ಕ್ಷೇತ್ರ ಶಾಸಕರಿಗೆ ಕ್ಷೇತ್ರದ ಅಭಿವೃದ್ದಿ ಕಡೆ ಗಮನಹರಿಸುವಷ್ಟು ಸಮಯವಿಲ್ಲವೆಂದ ಅವರು, ನಾಲ್ಕೂವರೆ ವರ್ಷದಲ್ಲಿ ಕೇವಲ 30 ಅಶ್ರಯ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ ಹೊರತು ಈ ಸರ್ಕಾರಕ್ಕೆ ಮತ್ತು ಶಾಸಕರಿಗೆ ಬಡಜನರ ಬಗ್ಗೆ ಕಾಳಜಿಯಿಲ್ಲವೆಂದು ಟೀಕಿಸಿದರು.

ಕೇಂದ್ರದ ವಾಜಪೇಯ ಸರ್ಕಾರ ಸರ್ವಶಿಕ್ಷ ಅಭಿಯಾನದಡಿ ಶಿಕ್ಷಣಕ್ಕೆ ಹುಚ್ಚು ಒತ್ತು ನೀಡಲಾಗಿ ಶಾಲಾ ಕಟ್ಟಡಗಳು ಮತ್ತು ಶಿಕ್ಷಕರ ಸಂಖ್ಯೆಯೊಂದಿಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುವಂತೆ ಮಾಡಿದ್ದರು ಆದರೆ ಈಗಿನ ಸರ್ಕಾರದಲ್ಲಿ ಶಿಕ್ಷಕರ ಮತ್ತು ಕೊಠಡಿಗಳ ಕೊರತೆಯೊಂದಿಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಕ್ಷೇತ್ರದ ಶಾಸಕರು ಮತ್ತು ಸರ್ಕಾರ ಸಂಪೂರ್ಣ ವಿಫವಾಗಿದೆ. ಇನ್ನೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ಇತಿಹಾಸಕಾರರನ್ನು ಮತ್ತು ಕುವೆಂಪು, ಬಸವಣ್ಣ, ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್, ನಾಡಗೀತೆಗೆ ಅವಮಾನಿಸಿರುವ ಪರಿಷ್ಕರಣ ಸಮಿತಿಯ ನಿಲುವನ್ನು ತೀವ್ರವಾಗಿ ಖಂಡಿಸಿ ಈ ಹಿಂದಿನಂತೆ ಪಠ್ಯಪುಸ್ತಕವನ್ನು ನೀಡುವ ಮೂಲಕ ಗ್ರಾಮಾಂತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಅವರು, 94 ಸಿ-94 ಸಿಸಿ ಅಡಿ ಹಕ್ಕು ಪತ್ರಕೊಡಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸ್ಲಂ ಕಾಲೋನಿಯಲ್ಲಿನ ಜನರ ಬದುಕು ಹೇಳತೀರದಾಗಿದೆ. ಒಟ್ಟಾರೆಯಾಗಿ ಕ್ಷೇತ್ರದ ಶಾಸಕರಿಗೆ ಗಣಪತಿ ಕೆರೆ ಒಂದು ಬಿಟ್ಟರೆ ಬೇರಾವುದೇ ಅಭಿವೃದ್ದಿ ಬೇಡವಾದಂತೆ ತೋರುತ್ತಿದ್ದು, ಗಣಪತಿ ಕೆರೆಯಲ್ಲಿ ಈಗಾಗಲೇ ಮೂರು ಜನಸಾವನ್ನಪ್ಪಿದ್ದಾರೆ ಅತ್ಮಹತ್ಯೆ ಮಾಡಿಕೊಳ್ಳಲೆಂದೆ ಈ ಕೆರೆ ಅಭಿವೃದ್ದಿ ಪಡಿಸಿದಂತೆ ಕಾಣುತ್ತಿದೆ ಎಂದು ಹೇಳಿದರು.

ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹೊಸನಗರ ಪಟ್ಟಣ ಪಂಚಾಯಿತಿ ಹೊರತು ಪಡಿಸಿ ಉಳಿದಂತೆ ಮಿನಿವಿಧಾನಸೌಧ, ಬಸ್ ನಿಲ್ದಾಣ, ಅಗ್ನಿಶಾಮಕ ದಳ ಕಛೇರಿ, ನ್ಯಾಯಾಲಯ ಕಟ್ಟಡ ಹೀಗೆ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗಿದ್ದು ನಂತರದಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪನವರು ನಾಲ್ಕೂವರೆ ವರ್ಷದಿಂದ ಪಟ್ಟಣ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.

ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಹಣ ಸಂದಾಯವಾಗಿಲ್ಲ ತಕ್ಷಣ ಹಣ ಕೊಡಿಸುವ ಕೆಲಸ ಮಾಡಿ ಮುರಾರ್ಜಿ ಶಾಲೆ ಮಂಜೂರಾದರೂ ಕಟ್ಟಡ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮಲೆನಾಡಿನ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಬಿತ್ತನೆಗೆ ಸಕಾಲವಾಗಿರುವ ಕಾರಣ ಬಿತ್ತನೆ ಬೀಜ ಮತ್ತು ಗೊಬ್ಬರ ಅಭಾವವಾಗದಂತೆ ರೈತರಿಗೆ ಸರ್ಕಾರ ಗಮನಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಶಾಸಕರು:

ಸಾಗರ-ಹೊಸನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ಅವ್ಯಾಹಿತವಾಗಿ ನಡೆಯುತ್ತಿದ್ದು ಶಾಸಕರು ಮರಳು ದಂಧೆಕೋರರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿಯೇ ಮುಳುಗಿಕೊಂಡಿದ್ದಾರೆ ಅಭಿವೃದ್ದಿಗಿಂತ ಹಣಗಳಿಕೆಯೇ ಗುರಿಯನ್ನಾಗಿಸಿಕೊಂಡಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ಸಾಗರ ನಗರಸಭಾ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೆ, ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಕರ, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ, ಗ್ರಾಮ ಪಂಚಾಯ್ತಿ ಸದಸ್ಯ ಅಸೀಫ್‌ಭಾಷಾ ಸಾಬ್, ಡಿ.ಈ.ಮಧುಸೂಧನ್, ಗವಟೂರು ಗಣಪತಿ, ಮುಖಂಡ ಉಲ್ಲಾಸ, ಚಿಂಟುಹಾಲುಗುಡ್ಡೆ, ಪಿಎನ್‌ಟಿ ಶ್ರೀಧರ, ರವಿಕುಮಾರ ಕೆರೆಹಳ್ಳಿ, ಫ್ಯಾನ್ಸಿ ರಮೇಶ್, ಗಣೇಶ್ ಕೆರೆಹಳ್ಳಿ, ರಾಜೂಗೌಡ ಶೆಟ್ಟಿಬೈಲು, ಹೆಚ್.ಎನ್.ಉಮೇಶ್‌ಗೌಡ, ನರಸಿಂಹ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here