ಕ್ಷೇತ್ರ ಪುನರ್‌ವಿಂಗಡಣೆ: ಜಿಪಂ, ತಾಪಂ ಕ್ಷೇತ್ರಗಳ ಸಂಖ್ಯೆ ನಿಗದಿ

0
697

ಶಿವಮೊಗ್ಗ: ರಾಜ್ಯ ಚುನಾವಣಾ ಆಯೋಗ ಪುನರ್‌ವಿಂಗಡಣೆಯಾದ ಜಿಲ್ಲಾ, ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಸಂಖ್ಯೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 31ರಿಂದ 35ಕ್ಕೆ ಹೆಚ್ಚಳವಾಗಿದೆ. ತಾಲ್ಲೂಕು ಪಂಚಾಯಿತಿಗಳ ಸಂಖ್ಯೆ 116 ರಿಂದ 90ಕ್ಕೆ ಇಳಿದಿದೆ.

ಮೊದಲು 40 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ, 10 ಸಾವಿರ ಜನ ಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ನಗದಿ ಮಾಡಲಾಗಿತ್ತು. ಹೊಸ ಆದೇಶದ ಪ್ರಕಾರ 35 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ, 12,500 ಜನ ಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸಿಲಾಗಿದೆ. ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ ತಾಲ್ಲೂಕಿನಲ್ಲಿ ತಲಾ ಒಂದು ಕ್ಷೇತ್ರಗಳು ಹೆಚ್ಚಾಗಿವೆ.

ಭದ್ರಾವತಿ, ತೀರ್ಥಹಳ್ಳಿ, ಸೊರಬ ತಾಲ್ಲೂಕಿನ ಕ್ಷೇತ್ರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಶಿವಮೊಗ್ಗ ತಾಲ್ಲೂಕಿನಲ್ಲಿ 4, ಭದ್ರಾವತಿ 5, ತೀರ್ಥಹಳ್ಳಿ 2, ಸಾಗರ 3, ಸೊರಬ 5, ಹೊಸನಗರ 3 ಹಾಗೂ ಶಿಕಾರಿಪುರ ತಾಲ್ಲೂಕಿನಲ್ಲಿ 4 ತಾಲ್ಲೂಕು ಪಂಚಾಯತಿ ಕ್ಷೇತ್ರಗಳು ಕಡಿಮೆಯಾಗಿವೆ.

ತಾಲ್ಲೂಕು – ಹಿಂದಿನ ಕ್ಷೇತ್ರಗಳು – ಈಗಿನ ಕ್ಷೇತ್ರಗಳು (ಜಿ.ಪಂ)

ಶಿವಮೊಗ್ಗ – 5 – 6

ಭದ್ರಾವತಿ – 5 – 5

ತೀರ್ಥಹಳ್ಳಿ – 4 – 4

ಸಾಗರ – 4 – 5

ಸೊರಬ – 5 – 5

ಹೊಸನಗರ – 3 – 4

ಶಿಕಾರಿಪುರ – 5 – 6

ಒಟ್ಟು 31 – 35

ತಾಲ್ಲೂಕು – ಹಿಂದಿನ ಕ್ಷೇತ್ರಗಳು – ಈಗಿನ ಕ್ಷೇತ್ರಗಳು (ತಾ.ಪಂ)

ಶಿವಮೊಗ್ಗ – 19 – 15

ಭದ್ರಾವತಿ – 19 – 14

ತೀರ್ಥಹಳ್ಳಿ – 13 – 11

ಸಾಗರ – 15 – 12

ಸೊರಬ – 19 – 14

ಹೊಸನಗರ – 12 – 9

ಶಿಕಾರಿಪುರ – 19 – 15

ಒಟ್ಟು 116 – 90

ಜಾಹಿರಾತು

LEAVE A REPLY

Please enter your comment!
Please enter your name here