ಬರ ; ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರಕ್ಕೆ ವಾಟಗೋಡು ಸುರೇಶ್ ಆಗ್ರಹ

0 372

ಹೊಸನಗರ: ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇರುವುದರಿಂದ ರಾಜ್ಯ ಸರ್ಕಾರ ಈಗಾಗಲೇ ಕೆಲವು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಕೂಡ ಮಾಡಿರುತ್ತದೆ ಆದರೆ ರಾಜ್ಯದ ಜನರಿಗೆ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ಬಜೆಟ್‌ನಲ್ಲಿ ರೈತರ ಸಾಲ ಮನ್ನಾದ ಜೊತೆಗೆ ಮಹಿಳಾ ಸಂಘದ ಸಾಲ, ಬಿಪಿಎಲ್ ಕುಟುಂಬದ ಬ್ಯಾಂಕ್ ಸಾಲ ಮನ್ನಾ ಮಾಡಬೇಕೆಂದು ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ವಾಟಗೋಡು ಸುರೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಬರಿ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾತ್ರ ಮಾಡಲಾಗಿದ್ದು ಇಲ್ಲಿಯವರೆಗೆ ರಾಜ್ಯದ ರೈತರ ಬೆಳೆಗಳಲ್ಲಿ ನಷ್ಟ ಉಂಟಾಗಿದ್ದು ಜಾನುವಾರುಗಳಿಗೆ ಮೇವಿನ ತೊಂದರೆ ಹಾಗೂ ಕಾಲುಬಾಯಿ ರೋಗಗಳಿಂದ ಬಳಲುತ್ತಿದ್ದು ಈ ರೀತಿ ಅನೇಕ ಸಂಕಷ್ಟವಾಗಿರುತ್ತದೆ. ಅಲ್ಲದೇ ಮಹಿಳಾ ಸ್ವಸಹಾಯ ಸಂಘಗಳು, ಕೃಷಿ, ಹೈನುಗಾರಿಕೆ ಹಾಗೂ ಗೃಹೋಪಯೋಗಿ ಹಾಗೂ ಇನ್ನಿತರೆ ಗುಂಪು ಯೋಜನೆಗಳಲ್ಲಿ ಪಡೆದಿರುವ ಸಾಲಗಳನ್ನು ಮರುಪಾವತಿ ಮಾಡಲು ಕಷ್ಟಕರವಾಗಿದ್ದು ಅಲ್ಲದೇ ಬಿಪಿಎಲ್ ಕುಟುಂಬದವರು ಅಂಗಡಿ, ಹೋಟೆಲ್ ನಂತಹ ಸಣ್ಣಸಣ್ಣ ಉದ್ಯಮಗಳನ್ನು ಹಾಗೂ ಇನ್ನಿತರ ವ್ಯವಹಾರ ಸಾಲಗಳನ್ನು ಪಡೆದಿದ್ದು ಬರಗಾಲದ ಹಿನ್ನೆಲೆಯಲ್ಲಿ ಮರುಪಾವತಿ ಮಾಡಲು ಸಾದ್ಯವಿಲ್ಲದ ಪರಿಸ್ಥಿತಿಯಲ್ಲಿದ್ದು ಈ ಎಲ್ಲಾ ಸಾಲಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬರ ಹಾಗೂ ನೆರೆ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಕೈ ಚಾಚದೇ ರಾಜ್ಯ ಸರ್ಕಾರದಿಂದಲೇ ಸಾಲ ಮನ್ನಾ ಮಾಡಿದರು ಇದರಿಂದ ರಾಜ್ಯದ ಲಕ್ಷಾಂತರ ರೈತರ ಕುಟುಂಬಗಳಿಗೆ ನೆರವಾಗಿತ್ತು ನಂತರದ ದಿನಗಳಲ್ಲಿ ಕೋವಿಡ್‌ನಿಂದ ನೆರೆ-ಬರಗಾಲದಿಂದ ಅಪಾರ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದು ರಾಜ್ಯ ಸರ್ಕಾರ ರಾಜ್ಯದ ರೈತರು, ಮಹಿಳಾ ಸಂಘಗಳು, ಬಿಪಿಎಲ್ ಕುಟುಂಬದವರು ಮಾಡಿರುವ ಬ್ಯಾಂಕ್ ಸಾಲಗಳನ್ನು ಮರುಪಾವತಿ ಮಾಡುವ ಸ್ಥಿತಿ ಇಲ್ಲದಂತಾಗಿದ್ದು ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲಾ ರೈತರಿಗೂ ಮಹಿಳಾ ಸಂಘಗಳಿಗೂ ಹಾಗೂ ಬಿಪಿಎಲ್ ಕುಟುಂಬದವರು ಮಾಡಿದ ಸಾಲಗಳನ್ನು ಮನ್ನಾ ಮಾಡಿ ಬಜೆಟ್‌ನಲ್ಲಿ ಘೋಷಿಸಬೇಕೆಂದರು.

Leave A Reply

Your email address will not be published.

error: Content is protected !!