ಶಿವಮೊಗ್ಗ: ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜೋತ್ಸವದ ಪೆರೇಡ್ ನಲ್ಲಿ, ಕೇರಳ ರಾಜ್ಯದಿಂದ ನಾರಾಯಣ ಗುರುವಿನ ಪ್ರತಿಮೆ ಹೊಂದಿದ ಸ್ತಬ್ದ ಚಿತ್ರವನ್ನು ನಡೆಸುವ ಸಲುವಾಗಿ ತೀರ್ಮಾನಿಸಿರುದನ್ನು ಕೇಂದ್ರ ಸರ್ಕಾರ ನಿರಾಕರಿಸಿದನ್ನು, ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಘಟಕ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ ತಿಳಿಸಿದರು.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ ಅವರು, ಇದು ಭಾರತದ ಸಾಧು ಸಂತರಿಗೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿದ ಅವಮಾನ. ದೇಶದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಮಹತ್ವ ಪೂರ್ಣ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಂತಹ ನಾರಾಯಣ ಗುರುವಿಗೆ ಅಪಮಾನ ಮಾಡಿರುವುದು ಖಂಡನೀಯ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರ ಕ್ಕೆ ಬಂದ ಕೇಂದ್ರ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ.
ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರ ಬದಲಿಸಿ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅನುಮತಿ ನೀಡಬೇಕು. ಒಂದೇ ಜಾತಿ ಒಂದೇ ಮತ ಎಂದು ವಿಶ್ವಕ್ಕೆ ಸಾರಿದ ಈ ದೇಶದ ಮಹಾನ್ ಸಂತರಿಗೆ ಗೌರವ ಸಲ್ಲಿಸಬೇಕು ಕೂಡಲೇ ಕೇಂದ್ರ ಸರ್ಕಾರ ಈ ಪ್ರಮಾದ ಬಗ್ಗೆ ದೇಶದ ಜನತೆಯಲ್ಲಿ ಕ್ಷಮೆಯಾಚಿಸಿ, ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ನೀಡಬೇಕು ಎಂದು ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ ಆಗ್ರಹಿಸಿದರು.