ಗಣಿಗಾರಿಕೆ ವಿರುದ್ಧ ಬಸ್ತಿಕೊಪ್ಪ ಗ್ರಾಮದ ಜನರು ಸಮರ ಎದುರಿಸಿದರು ; ಅನಂತ್ ಹೆಗಡೆ ಅಶೀಸರ

0
160

ಸೊರಬ: ನಾಡಿನಲ್ಲಿ ಪ್ರಸ್ತುತಿ ಪಡೆದಂತಹ ಧಾರ್ಮಿಕ ಕೇಂದ್ರವಾದ ತಾಲೂಕಿನ ಚಂದ್ರಗುತ್ತಿ ಪ್ರದೇಶದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಗ್ರಾಮದ ಜನರು ಸಮರವನ್ನು ಎದುರಿಸಿದರು ಎಂದು ಜೀವವೈವಿದ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ಹೇಳಿದರು.

ತಾಲ್ಲೂಕು ಪಂಚಾಯತಿ ಸೊರಬ, ಗ್ರಾಮ ಪಂಚಾಯಿತಿ ಚಂದ್ರಗುತ್ತಿ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ವಕ್ಷ ಲಕ್ಷ ಆಂದೋಲನ ಕರ್ನಾಟಕ, ಪರಿಸರ ಜಾಗೃತಿ ಟ್ರಸ್ಟ್ ಸೊರಬ. ಜೀವವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ವಿವಿಧ ಇಲಾಖೆಗಳು ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಹಮ್ಮಿಕೊಂಡಿದ್ದ ಗ್ರಾಮಾಭಿವೃದ್ಧಿ ಶಿಭಿರ, ವನ ನಿರ್ಮಾಣ, ಪರಿಸರ ಜಾಗೃತಿ, ಆರೋಗ್ಯ ತಪಾಸಣೆ, ಕೃಷಿ ತೋಟಗಾರಿಕೆ ಚೇತರಿಕೆ, ಸಸಿ ವಿತರಣೆ ಮುಂತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಬಸ್ತಿಕೊಪ್ಪ ಗ್ರಾಮದಲ್ಲಿ ಈ ಹಿಂದೆ ಗಣಿಗಾರಿಕೆಯಿಂದಾದ ದುಷ್ಪರಿಣಾಮಗಳ ಪರಿಶೀಲನೆ ಕುರಿತಂತೆ ವಿವಿಧ ಇಲಾಖೆ ಗಳೊಂದಿಗೆ ಮಾತಾಡಿದ್ದು ಆ ಮೂಲಕ ಪರಿಹಾರಾತ್ಮಕ ಚಟುವಟಿಕೆಗಳು ನಡೆಯುತ್ತವೆ ಎಂದರು.

ಆರೋಗ್ಯ, ಕೃಷಿ, ತೋಟಗಾರಿಕೆ, ಜಿ.ಪಂ, ತಾ.ಪಂ, ಮೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಸಂವಾದ ಕಾರ್ಯಕ್ರಮ ನಡೆಸಿದ ಅವರು ವೃತ್ತಾರೋಪಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಭೂಮಿಯಲ್ಲಿ ಬಹುರೂಪಿ ವನ. ಹಾಗೂ ಮುಂದಿನ ದಿನಗಳಲ್ಲಿ ಸಂಪೂರ್ಣ ಗಣಿ ನಿಷೇದ ಕುರಿತು ನಿರ್ಣಯ ಕೃಗೊಳಲಾಯಿತು. ಆರೋಗ್ಯ ತಪಾಸಣೆಯಲ್ಲಿ ವಿವಿಧ ತಜ್ಞ ವೈದ್ಯರು ಪಾಲ್ಗೊಂಡಿದ್ದರು, ಇದೇ ವೇಳೆ ಜೀವವೃವಿಧ್ಯ ನಿರ್ವಹಣಾ ಸಮಿತಿಯಿಂದ ಚಂದ್ರಗುತ್ತಿ ಬೆಟ್ಟ ಪ್ರದೇಶದ ಉರುಗ ಸಂಕುಲ ದಾಖಲಾತಿಯನ್ನು ಬಿಡುಗಡೆ ಗೊಳಿಸಲಾಯಿತು. ಗ್ರಾಮಸ್ಥರು ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ಗಣಿ ದುಪ್ಪರಿಣಾಮಗಳ ಕುರಿತು ಬೇಸರ ವೃಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ.ಪಂ. ಅಧ್ಯಕ್ಷ ರತ್ನಾಕರ್ ಎಂ.ಪಿ. ವಹಿಸಿದ್ದರು, ಜೀವ ವೈವಿಧ್ಯ ಸಮಿತಿ ತಜ್ಞ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಫ್.ಓ ರಾಮಕೃಷ್ಣ, ಜಿ.ಪಂ. ಮಲ್ಲಿಕಾರ್ಜುನ್, ಎ.ಸಿ.ಎಫ್ ಪ್ರವೀಣ್, ಆರ್.ಫ್.ಓ ಜಮೀದ್ ಅಂಗಡಿ, ಸಾಮಾಜಿಕ ಅರಣ್ಯಾಧಿಕಾರಿ ಆರ್. ಎಫ್.ಓ ಪವನ್ ಕುಮಾರ್, ಇ ಓ ಕುಮಾರ್ ಮೆಸ್ಕಾಂ ಎಸ್.ಓ ಮುಕ್ತಾರ್ ಅಹಮದ್, ಟಿ.ಹೆಚ್.ಓ ಡಾ|| ಪ್ರಭು ಸಾಹುಕಾರ್, ತಾ.ಪಂ. ಎ‌.ಡಿ ಶ್ರೀರಾಮ್, ಶಿಕ್ಷಣ ಸಮನ್ವಯಾಧಿಕಾರಿ ದಯಾನಂದ ಕಲ್ಲೇಶ್, ಟಿ.ಪಿ.ಇ.ಓ ಲಿಂಗರಾಜ ಒಡೆಯರ್,ಚಂದ್ರಗುತ್ತಿ ವೈದ್ಯಾಧಿಕಾರಿ ಶಕುಂತಲಾ ಬಾಯಿ, ಪಿ.ಡಿ.ಓ ಈಶ್ವರಪ್ಪ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಸದಸ್ಯರಾದ ಶಿಲ್ಪ ಗಿರಿ ಗೌಡ್ರು, ಸಲೀಂ, ಸಿ.ಆರ್.ಪಿ ರಾಘವೇಂದ್ರ, ಲೋಕೇಶಪ್ಪ ಶಿಕ್ಷಕರು, ಗ್ರಾಮಸ್ಥರಾದ ನಾಗರಾಜ್, ನೂರ್ ಅಹಮದ್, ದಿನೇಶ್ ಅಂಚೆ, ಮಂಜು ಬಡಗಿ, ರಘು, ಶಶಿ, ಪ್ರವೀಣ್, ಮೊದಲಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here