ಗಬ್ಗಲ್ ಗ್ರಾಮದಲ್ಲಿ ನಿವೇಶನ ರಹಿತರಿಂದ ಸ್ಥಳದಲ್ಲೇ ಟೆಂಟ್ ಹಾಕಿ ಧರಣಿ

0
260

ಮೂಡಿಗೆರೆ: ಕೂವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗಬ್ಗಲ್‌ ಗ್ರಾಮದ ಸರ್ವೆ ನಂಬರ್ 163 ರಲ್ಲಿ ನಿವೇಶನ ರಹಿತರು ಟೆಂಟ್ ನಿರ್ಮಿಸಿಕೊಂಡು ನಿವೇಶನಕ್ಕಾಗಿ ಧರಣಿ ನಡೆಸಿದ್ದಾರೆ.

ಗಬ್ಗಲ್‌ನಲ್ಲಿನ ಸರ್ವೆ ನಂಬರ್ 163 ರಲ್ಲಿ ಬೆಳೆದಂತಹ ಗಿಡ-ಗಂಟಿಗಳನ್ನು ತೆರವು ಮಾಡಿ ಅಲ್ಲೆ ಟೆಂಟ್ ಹಾಕಿಕೊಂಡು ಸುಮಾರು 200ಕ್ಕೂ ಅಧಿಕ ಮಂದಿ ನಿವೇಶನ ಇಲ್ಲದವರು ಪ್ರತಿಭಟನೆ ನಡೆಸಿ ಅನೇಕ ಸಲ ಗ್ರಾಮ ಪಂಚಾಯತಿಗೆ ನಿವೇಶನ ಮಂಜೂರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಈ ಕಾರಣದಿಂದ ನಾವುಗಳು ಸರ್ಕಾರದ ಭೂಮಿಯಲ್ಲಿ ಟೆಂಟ್ ಹಾಕಿದ್ದೇವೆ, ಸರ್ಕಾರಿದ ಜಾಗ ಹಣ ಇರುವವರ ಪಾಲಾಗುತ್ತಿದ್ದು ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಿ ನಿವೇಶನ ರಹಿತ ಬಡವರಿಗೆ ನೀಡಬೇಕು. ಸರ್ವೆ ನಂ. 163 ಮತ್ತು 21ರಲ್ಲಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ರಾಜಸ್ವ ನಿರೀಕ್ಷಕ ಕೃಷ್ಣಕುಮಾರ್ ನಿವೇಶನ ರಹಿತರ ಮಾತುಗಳನ್ನು ಕೆಳಿದ ನಂತರ ಸರ್ವೆ ನಂಬರ್ 163 ರಲ್ಲಿ ಗೋಮಾಳದ ಜಾಗ ಹಾಗೂ ಅರಣ್ಯ ಇಲಾಖೆಯ ಜಾಗವಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿವೇಶನ ರಹಿತರು ಅಧಿಕಾರಿಗಳ ಭರವಸೆಯ ನಂತರ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟ ಒಂದು ವಾರದೊಳಗೆ ನಿವೇಶನ ನೀಡಲು ಮುಂದಾಗದಿದ್ದರೆ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸರಿತಾ, ಕೂವೆ ಗ್ರಾಪಂ ಸದಸ್ಯ ಶಿವರಾಜ್, ಸತೀಶ್, ರಾಜೇಶ್, ಸುಂದರೇಶ್, ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ನಿವೇಶನ ರಹಿತರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here