ಗರಡಿಮನೆ ಜಾಗದಲ್ಲಿ ತಲೆ ಎತ್ತುತ್ತಿರುವ ವಾಣಿಜ್ಯ ಮಳಿಗೆ..! ಕಾಮಗಾರಿ ತಡೆದ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ

0
703

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ಗ್ರಾಮದ ಸಾಗರ ರಸ್ತೆಯಲ್ಲಿ ಈ ಹಿಂದೆ ಗರಡಿಮನೆಗಾಗಿ ಜಾಗವನ್ನು ಕಾಯ್ದಿರಿಸಲಾಗಿದ್ದು ಈಗ್ಗೆ ಎರಡು ಮೂರು ದಿನಗಳಿಂದ ಏಕಾಏಕಿ ಸದರಿ ಜಾಗದಲ್ಲಿ ವಾಣಿಜ್ಯ ಮಳಿಗೆಗೆ ತಯಾರಿನಡೆಸುವ ಮೂಲಕ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಆರೋಪಿಸಿ ತಕ್ಷಣ ಈ ಜಾಗವನ್ನು ಗರಡಿಮನೆಗೆ ಮೀಸಲಾಗಿಡುವಂತೆ ಒತ್ತಾಯಿಸಿ ಏಕಾಂಗಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಕಾಮಗಾರಿಯನ್ನು ತಡೆದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ 14ನೇ ಹಣಕಾಸು ಯೋಜನೆಯಡಿ ವಾಣಿಜ್ಯ ಮಳಿಗಗೆ ಹಣ ಮಂಜೂರು ಮಾಡುವ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅರಂಭಿಸಲಾಗಿದ್ದು ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಪಂಚಾಯತಿಗೆ ಆರ್.ಟಿ.ಐ. ಮೂಲಕ ಮಾಹಿತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದ್ದು ಮಾಹಿತಿ ನೀಡುವ ಅಧಿಕಾರಿಗಳು ವಿಳಂಬ ದೋರಣೆಯಿಂದಾಗಿ ಆಕ್ರೋಶಗೊಂಡ ಅವರು ಗುತ್ತಿಗೆದಾರರಲ್ಲಿ ಬಿಡುಗಡೆಯಾದ ಮೊತ್ತ ಎಷ್ಟು ಯಾವ ಉದ್ದೇಶದಿಂದಾಗಿ ಈ ಯೋಜನೆ ಮಾಡಲಾಗಿದೆ ಎಂದು ಪ್ರಶ್ನಿಸಿ ಮಾಹಿತಿಯನ್ನು ಕೇಳಿದರೆ ಸಂಬಂಧಪಟ್ಟ ಅಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದ್ದಾರೆಂದು ಏಕಾಂಗಿ ಹೋರಾಟಗಾರ ಆರೋಪಿಸಿ ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯದರ್ಶಿಯವರಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದರ ಪರಿಣಾಮ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿದ್ದಾರೆನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here