ಗರ್ಭಿಣಿ ಎಂದುಕೊಂಡಿದ್ದ ಮಹಿಳೆಯ ಹೊಟ್ಟೆಯಲ್ಲಿತ್ತು 6 ಕೆ.ಜಿ ತೂಕದ ಗೆಡ್ಡೆ..!

0
726

ಶಿವಮೊಗ್ಗ : ತಾನು 6ತಿಂಗಳ ಗರ್ಭಿಣಿ ಎಂದು ಸಂತಸದಿಂದಿದ್ದ ಮಹಿಳೆಯೋರ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದರೆ ಬೃಹದಾಕಾರದ ಗೆಡ್ಡೆ ಹುಟ್ಟಿರುವುದು ಕಂಡುಬಂದಿದೆ.

ಈ ಅಪರೂಪದ ಘಟನೆ ನಡೆದಿದ್ದು ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿರುವ ಸೇಫ್ ಐವಿಎಫ್ ಸೆಂಟರ್‌ನಲ್ಲಿ.

ಕಡೂರು ತಾಲೂಕಿನ ಗ್ರಾಮವೊಂದರ ಮಹಿಳೆ ಕಳೆದ 6 ತಿಂಗಳಿನಿಂದ ತನ್ನ ಹೊಟ್ಟೆ ಬೆಳೆದಿರುವುದರಿಂದ ತಾನು ಗರ್ಭಿಣಿಯಾಗಿದ್ದೇನೆಂದು ಮೊದಲು ಕಡೂರಿನ ಆಸ್ಪತ್ರೆಯೊಂದಕ್ಕೆ ತೋರಿಸಿದ್ದಾರೆ. ಆದರೆ ಅಲ್ಲಿ ತೋರಿಸಿದಾಗ ದೊಡ್ಡ ಗಾತ್ರದ 6 ಕೆಜಿ ಇರುವ ಗೆಡ್ಡೆ ಇರುವುದರ ವಿಷಯ ತಿಳಿದು ಗೃಹಿಣಿ ಆಘಾತಕ್ಕೊಳಗಾಗಿದ್ದಾರೆ. ನಂತರ‌ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸೇಫ್ ಐವಿಎಫ್ ಸೆಂಟರ್‌ಗೆ ಬಂದು ಮತ್ತೊಮ್ಮೆ ಸ್ಕ್ಯಾನ್ ಮಾಡಿಸುತ್ತಾರೆ. ನಂತರ ಆಸ್ಪತ್ರೆ ವೈದ್ಯ ಡಾ|| ಮಧು ಮತ್ತು ಡಾ|| ಚಂಪ ಅವರ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಡಾ|| ಮಧು ಮತ್ತು ಡಾ|| ಚಂಪ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲು ಸಹಕರಿಸಿದ ವೈದ್ಯರ ತಂಡಕ್ಕೆ ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here